ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ವಿಶೇಷ ಶಿಬಿರ

ಶೇರ್ ಮಾಡಿ

ನೇಸರ ಜು.24: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ನಾಲ್ಕು ದಿನಗಳ ವಾರ್ಷಿಕ ವಿಶೇಷ ಶಿಬಿರವು ಆಗಸ್ಟ್ 23ರಂದು ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು. ಸುಳ್ಯದ ಸೇತುವೆಯ ಸರದಾರ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ರಸ್ತುತ ಕಾಲಮಾನಕ್ಕೆ ಅಗತ್ಯವಿರುವ ಪ್ರಥಮ ಚಿಕಿತ್ಸೆ ವಿಪತ್ತು ನಿರ್ವಹಣಾ ತರಬೇತಿ, ನೈತಿಕ ಮೌಲ್ಯಗಳು ವ್ಯಕ್ತಿತ್ವವಿಕಸನ ಮೊದಲಾದ ಉತ್ತಮ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಶಿಬಿರವನ್ನು ಆಯೋಜಿಸಿದುದು ಶ್ಲಾಘನೀಯ ಎಂದರು.

ಕಾಲೇಜಿನ ಪ್ರಾಂಶುಪಾಲ ರುದ್ರ ಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಬಾಲಚಂದ್ರ ಗೌಡ ಎಂ, ಕರ್ನಾಟಕ ರಾಜ್ಯ ವೈಜ್ಞಾನಿಕ. ಸಂಶೋಧನಾ ಪರಿಷತ್ತು (ರಿ), ಇದರ ಸುಳ್ಯ ಘಟಕದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರತ್ನಾವತಿ ಡಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಮುಖ್ಯಸ್ಥ
ಇನ್ಸ್ಪೆಕ್ಟರ್ ಶಿವಕುಮಾರ್ ಮೊದಲಾದವರು ಭಾಗವಹಿಸಿದ್ದರು. ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ಅನುರಾಧಾ ಕುರುಂಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಬಿರದ ನಾಯಕರುಗಳಾದ ನಿರಂಜನ್ ಕೆ, ಲಿಖಿತ್ ಎಂ ಎನ್, ಶುಭಾ. ಪಿ, ಲತಾಶ್ರೀ ಡಿ, ನಿರೀಕ್ಷಾ, ಪುನೀತ ಕೆ ಸಿ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೆಡ್ ಕ್ರಾಸ್ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂಜಯ ಜೆ ಎಸ್ ನಿರೂಪಿಸಿ ಕೃಷ್ಣವೇಣಿ ವಂದಿಸಿದರು. ಶಿಬಿರದ ಆರಂಭದ ದಿನ ಕರ್ನಾಟಕ ರಾಜ್ಯ ವೈಜ್ಞಾನಿಕ. ಸಂಶೋಧನಾ ಪರಿಷತ್ತಿನ ಸಹಯೋಗದೊಂದಿಗೆ ಪ್ರಥಮ ಚಿಕಿತ್ಸೆ ತರಬೇತಿ ಹಾಗೂ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರ ನಡೆಯಿತು. ತರಬೇತುದಾರರಾಗಿ ಎನ್ ಡಿ ಆರ್ ಎಫ್ ತಂಡದ

ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಹೆಡ್ ಕಾನ್ಸ್ಟೇಬಲ್ ಭೂಪೇಂದ್ರ ಸಿಂಗ, ಹೆಡ್ ಕಾನ್ಸ್ಟೇಬಲ್ ಉಮಾಪತಿ, ಕ್ಯಾಪ್ಟನ್ ವಿನೋದ್ ಅರ್ಜುನ್ ಅರೆರ್, ಕ್ಯಾಪ್ಟನ್ ಜೆ ಶಿವನಾಥನ್, ಕ್ಯಾಪ್ಟನ್ ಸಂದೀಪ್ ಸಿಂಗ್ ಮೊದಲಾದವರು ಭಾಗವಹಿಸಿದ್ದರು. ನಾಲ್ಕು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಭತ್ತ ನಾಟಿ, ಕೆಸರುಗದ್ದೆ ಆಟೋಟ ಸ್ಪರ್ಧೆಗಳು, ನೈತಿಕ ಮೌಲ್ಯಗಳು, ಮಾನಸಿಕ ಸ್ಥೈರ್ಯ ಮತ್ತು ಬದುಕುವ ಕಲೆ, ನಾಯಕತ್ವ, ವ್ಯಕ್ತಿತ್ವ ವಿಕಸನ ಮೊದಲಾದ ತರಬೇತಿ ಕಾರ್ಯಕ್ರಮಗಳು ನಡೆಯಲಿವೆ. ತರಬೇತುದಾರರಾಗಿ ಎನ್ ಡಿ ಆರ್ ಎಫ್ ತಂಡ, ವೇದಮೂರ್ತಿ ವೆಂಕಟೇಶ ಶಾಸ್ತ್ರಿ, ಮನಶಾಸ್ತ್ರಜ್ಞೆ ನಮೃತ ಕೆ ಬಿ, ಡಾ.ಅನುರಾಧಾ ಕುರುಂಜಿ ಮೊದಲಾದವರು ಭಾಗವಹಿಸಲಿದ್ದಾರೆ

Leave a Reply

error: Content is protected !!