ನೇಸರ ಜು.26: ಮುಂಡಾಜೆಯ ಕಾರ್ಗಿಲ್ ವನದಲ್ಲಿ ಮಂಗಳವಾರ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು
ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ನೆನಪಲ್ಲಿ ಮುಂಡಾಜೆಯ ಕೃಷಿಕ ಸಚಿನ್ ಭಿಡೆ ತಮ್ಮ 5 ಎಕರೆ ಜಾಗದಲ್ಲಿ ನಾನಾ ಜಾತಿಯ 800 ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡುತ್ತಿದ್ದಾರೆ.
ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳು ಭಾಗವಹಿಸಿ ಕಾರ್ಗಿಲ್ ವನದಲ್ಲಿ ಇರುವ ಗಿಡಗಳ ಸುತ್ತ ಬೆಳೆದ ಗಿಡ ಗಂಟಿ ತೆರೆವು ಗೊಳಿಸಿ, ಸ್ವಚ್ಛತೆಯನ್ನು ನೆರವೇರಿಸಿದರು.
ಸಂಘದ ಅಧ್ಯಕ್ಷ ಸುನಿಲ್ ಶೆಣೈ, ಪದಾಧಿಕಾರಿಗಳಾದ ಎಂ.ವಿ.ಭಟ್, ಕೃಷ್ಣ ಭಟ್, ಶ್ರೀಕಾಂತ ಗೋರೆ ಹಾಗೂ ಸದಸ್ಯರು, ಪರಿಸರ ಪ್ರೇಮಿ ಅರಸಿನಮಕ್ಕಿ ಅವಿನಾಶ್ ಭಿಡೆ, ಸ್ಥಳೀಯರಾದ ಲತಾ ಭಿಡೆ, ಸುನಿಲ್ ಭಿಡೆ, ಬಾಲಚಂದ್ರ ನಾಯಕ್, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.
ಗಿಡಗಳ ನಾಟಿ
ಕಾರ್ಗಿಲ್ ವನ ಇರುವ ಧುಂಬೆಟ್ಟು ಪ್ರದೇಶವು ಕಾಡಾನೆಗಳ ಹಾವಳಿಗೆ ಸದಾ ತುತ್ತಾಗುತ್ತಿದ್ದು ಕಾರ್ಗಿಲ್ ವನದ ಸುಮಾರು 100 ಕ್ಕಿಂತ ಅಧಿಕ ಗಿಡಗಳನ್ನು ಮುರಿದು ಹಾಕಿವೆ. ಈ ಸ್ಥಳಗಳಲ್ಲಿ ಗಿಡಗಳನ್ನು ಮರು ನಾಟಿ ಮಾಡಲಾಯಿತು.