ನೇಸರ ಜು.27: ದೇಶದ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಮನಸ್ಸಿದ್ದರೂ ಅನೇಕರಿಗೆ ಆ ಅವಕಾಶ ಸಿಗುವುದಿಲ್ಲ. ಅವಕಾಶ ಸಿಕ್ಕಿದರೆ ಅದು ಒಂದು ಪುಣ್ಯದ ಕೆಲಸ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವವರ ಹೆಸರು ಚಿರಸ್ಥಾಯಿಯಾಗಿ ಉಳಿಯುವುದು ಅಲ್ಲದೆ ಭಾರತೀಯರು ಸೈನಿಕರಿಗೆ ಪೂರ್ಣ ಪ್ರಮಾಣದ ನೈತಿಕ ಬೆಂಬಲ ನೀಡುವುದು ಅತ್ಯಂತ ಸಂತಸದ ಸಂಗತಿ ಎಂದು ನಿವೃತ್ತ Honorary Captain ಎಸ್.ಕೇಶವಾಚಾರಿ ಹೇಳಿದರು. ಅವರು ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ ಅಳುಪ ಸಮಾಜ ವಿಜ್ಞಾನ ಸಂಘ ಮತ್ತು ಜೇಸಿಐ ಜೋಡುಮಾರ್ಗ ನೇತ್ರಾವತಿ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ್ ನಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ ವಹಿಸಿದ್ದರು. ಶಾಲಾ ಹಿರಿಯ ವಿದ್ಯಾರ್ಥಿ ದೀಪಕ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಜೆಸಿಐ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷರಾದ ಹರಿಪ್ರಸಾದ್ ಕುಲಾಲ್, ನಿವೃತ್ತ ಯೋಧ ಹರೀಶ್ ದೇವಂದ ಬೆಟ್ಟು ಹಾಗೂ ಶಾಲಾ ಶಿಕ್ಷಕರಾದ ಭಾರತಿ, ವಸಂತಿ, ಪ್ರಕಾಶ್, ವರಮಹಾಲಕ್ಷ್ಮೀ, ಸುಜಾತ, ಶ್ರುತಿ, ಮಂಜುಶ್ರೀ,ಶಾಲಾ ನಾಯಕ ಕಾರ್ತಿಕ್ ಉಪಸ್ಥಿತರಿದ್ದರು.
ಶಾಲಾ ಉಪಮುಖ್ಯಮಂತ್ರಿ ಶ್ರೀಜಾ ಸ್ವಾಗತಿಸಿ, ರಶ್ಮಿತಾ ವಂದಿಸಿದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.