ನೇಸರ ಆ.01: ವಿಶ್ವವಿದ್ಯಾಲಯ ಕಾಲೇಜು ನೆಲ್ಯಾಡಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ: ವಸಾಹತು ಕಾಲಘಟ್ಟದ ಇತಿಹಾಸ ಕಥನ ಎಂಬ ವಿಷಯದ ಮೇಲೆ ರಾಷ್ಟ್ರೀಯ ವಿಚಾರ ಸಂಕಿರಣವು ನಡೆಯಲ್ಪಟ್ಟಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಡಾ.ಎನ್.ಶ್ಯಾಮ್ ಭಟ್, ನಿವೃತ್ತ ಪ್ರೊಫೆಸರ್ ಹಾಗೂ ಮುಖ್ಯಸ್ಥರು ಇತಿಹಾಸ ವಿಭಾಗ ಗೋವಾ ವಿಶ್ವವಿದ್ಯಾಲಯ ಮತ್ತು ಡೀನ್, ಸಮಾಜ ವಿಜ್ಞಾನ ನಿಕಾಯ, ಗೋವಾ ವಿಶ್ವ ವಿದ್ಯಾಲಯ, ಭಾಗವಹಿಸಿದರು. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಭಾರತದ ಸ್ವಾತಂತ್ರ್ಯ ಹೋರಾಟದ ವಿಸ್ತಾರ ಇತಿಹಾಸವನ್ನು ತೆರೆದಿಟ್ಟು, ರಾಷ್ಟ್ರ ಪ್ರೇಮ ಮೂಡಲು ಪ್ರೇರೆಪಿಸಿದರು. ಸ್ವಾತಂತ್ರ್ಯ ಹೋರಾಟದ ತ್ಯಾಗ ತಿಳಿಯಬೇಕಾದರೆ ಇತಿಹಾಸ ಓದಬೇಕು. ಆಚರಣೆಯೊಂದಿಗೆ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡರೆ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯ ಕಾಲೇಜು ನೆಲ್ಯಾಡಿಯ ಸಂಯೋಜಕರಾದ ಡಾ. ಜಯರಾಜ್ ಎನ್. ವಹಿಸಿಕೊಂಡು, ಸ್ವಾತಂತ್ರ್ಯದ ಹೋರಾಟದ ಘಟನಾವಳಿಗಳನ್ನು ತೆರೆದಿಡುತ್ತಾ ಇದರ ಫಲವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಅಂದರು. ಡಾ. ಸೀತಾರಾಮ ಪಿ., ಮುಖ್ಯಸ್ಥರು ಇತಿಹಾಸ ವಿಭಾಗ ಹಾಗೂ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮಗಳ ಸಂಚಾಲಕರು ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಸ್ಪೂರ್ತಿ ಕೆ.ಟಿ. ಇವರು ಧನ್ಯವಾದಗಳನ್ನು ಸಮರ್ಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆಯ ಮುಖಾಂತರ ಶುಭಾರಂಭ ಮಾಡಿದರು. ಉಪನ್ಯಾಸಕಿಯರಾದ ಡೀನಾ ಮತ್ತು ಶ್ರೀಮತಿ ದಿವ್ಯಾಶ್ರೀ ಜಿ. ಇವರು ನಿರೂಪಿಸಿದರು. ವೇದಿಕೆಯಲ್ಲಿ ಸೆಮಿನಾರ್ ನ ಸಹಸಂಚಾಲಕಿ ಶ್ರೀಮತಿ ಲೀಲಾವತಿ, ಇತಿಹಾಸ ಉಪನ್ಯಾಸಕಿ ಉಪಸ್ಥಿತರಿದ್ದರು.
ಮೊದಲ ಗೋಷ್ಠಿಯಲ್ಲಿ, ಡಾ. ಜಯರಾಜ್ ಎನ್ ಇವರ ಅಧ್ಯಕ್ಷತೆಯಲ್ಲಿ ಡಾ.ಎನ್ ಶ್ಯಾಮ್ ಭಟ್ ಇವರು ‘ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ: ಕೆಲವು ದೃಷ್ಟಿಕೋನಗಳು’ ಎಂಬ ವಿಷಯದ ಕುರಿತಂತೆ ಸಂಪನ್ಮೂಲ ವ್ಯಕ್ತಿಯಾಗಿ ವಿಷಯ ಮಂಡನೆ ಮಾಡಿದರು. ಈ ಗೋಷ್ಠಿಯಲ್ಲಿ ಆಂಗ್ಲ ಉಪನ್ಯಾಸಕಿ ವನಿತಾ ಪಿ. ಧನ್ಯವಾದಗಳನ್ನು ಸಮರ್ಪಿಸಿದರು.
ಎರಡನೇಯ ಗೋಷ್ಠಿಯು ಡಾ.ನೊರ್ಬರ್ಟ್ ಮಸ್ಕರೇನಸ್, ಸಹಪ್ರಾಧ್ಯಾಪಕರು, ಫಿಲೋಮಿನಾ ಕಾಲೇಜು, ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರೊ.ಪೀಟರ್ ವಿಲ್ಸನ್ ಪ್ರಭಾಕರ್, ನಿವೃತ್ತ ಇತಿಹಾಸ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರು ವಿವೇಕಾನಂದ ಕಾಲೇಜು, ಪುತ್ತೂರು ಇವರು ‘ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಬಾಸೆಲ್ ಮಿಶನ್ ನ ಪಾತ್ರ’ ಹಾಗೂ ಡಾ.ಶ್ರೀದರ್ ನಾಯ್ಕ, ಮುಖ್ಯಸ್ಥರು, ಇತಿಹಾಸ ವಿಭಾಗ, ಫಿಲೋಮಿನಾ ಕಾಲೇಜು ಇವರು ‘ಕಾಸರಗೋಡು ಸ್ವಾತಂತ್ರ್ಯ ಚಳುವಳಿ: ಗಾಂಧೀಜಿ ಪ್ರಭಾವ’ ಮತ್ತು ಡಾ. ಸೀತಾರಾಮ ಪಿ ಇವರು ‘ಸ್ವಾತಂತ್ರ್ಯಪೂರ್ವ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಪತ್ರಿಕೆಗಳ ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ನಿರೂಪಣೆ’ ಎಂಬ ವಿಷಯಗಳ ಕುರಿತಂತೆ ವಿಷಯ ಮಂಡನೆ ಮಾಡಿದರು. ಶ್ರೀಮತಿ ನಿಶ್ಮಿತಾ ಪಿ ಸ್ವಾಗತಿಸಿದರು. ಶ್ರೀ ಸುರೇಶ್ ಕೆ ಧನ್ಯವಾದಗಳನ್ನು ಸಮರ್ಪಿಸಿದರು.
ಈ ಗೋಷ್ಠಿಯ ನಿರೂಪಣೆಯನ್ನು ಶ್ರೀಮತಿ ಚಂದ್ರಕಲಾ ನಿರ್ವಹಿಸಿದರು. ಎಲ್ಲಾ ವಿಚಾರ ಗೋಷ್ಠಿಗಳಲ್ಲಿ ಸಭಿಕರೊಂದಿಗೆ ಸಂವಾದ ನಡೆಯಿತು. ಮುಂದಿನ ಗೋಷ್ಠಿಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟದ ಕುರಿತಂತೆ ವಿಷಯ ಮಂಡನೆ ಮಾಡಿದರು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀಮತಿ ಲೀಲಾವತಿ, ಇತಿಹಾಸ ಉಪನ್ಯಾಸಕಿ ಇವರು ವಹಿಸಿಕೊಂಡು ನಿರ್ವಹಿಸಿದರು.
ಸಮಾರೋಪ ಸಮಾರಂಭ
ಪ್ರೊ.ಪೀಟರ್ ವಿಲ್ಸನ್ ಪ್ರಭಾಕರ್ ಸಮಾರೋಪ ಮಾತುಗಳನ್ನು ಆಡುತ್ತಾ, ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ವಿಚಾರದ ಅರಿವಿನ ಸ್ಪಷ್ಟತೆಯ ಬಗ್ಗೆ ಉಲ್ಲೇಖಿಸುತ್ತಾ, ನೈಜ ಇತಿಹಾಸ ಕಟ್ಟುವುದರೊಂದಿಗೆ ಮರೆತುಹೋದ ಇತಿಹಾಸವನ್ನು ಪುನರ್ ರೂಪಿಸಬೇಕು ಅಂದರು. ಅಧ್ಯಕ್ಷತೆಯನ್ನು ಡಾ.ಜಯರಾಜ್ ಎನ್ ವಹಿಸಿಕೊಂಡು ಇತಿಹಾಸವನ್ನು ಅಧ್ಯಯನ ಮಾಡಿಯೇ ಮಾತಾಡಬೇಕು. ಇತಿಹಾಸದ ಘಟನಾವಳಿಗಳ ಕುರಿತಂತೆ ಬಾಲಿಶ ಹೇಳಿಕೆಗಳನ್ನು ಕೊಡಬಾರದು ಅಂದರು. ಸ್ವಾಗತ ಉಪನ್ಯಾಸಕಿ ಶ್ರೀಮತಿ ದಿವ್ಯಾ ಕೆ ಮಾಡಿದರೆ, ಧನ್ಯವಾದಗಳನ್ನು ಶ್ರೀಮತಿ ಲೀಲಾವತಿ ಇವರು ಸಮರ್ಪಿಸಿದರು. ಶ್ರೀಮತಿ ವೆರೋನಿಕಾ ಪ್ರಭಾ ವಿ.ಪಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಸೀತಾರಾಮ ಪಿ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕರಾದ ಅಬ್ರಹಾಂ ವರ್ಗೀಸ್, ಸೈಂಟ್ ಜಾರ್ಜ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಏಲಿಯಸ್ ಎಂ ಕೆ, ಉಪನ್ಯಾಸಕರಾದ ವಿಶ್ವನಾಥ್ ಶೆಟ್ಟಿ, ಮಧು ಎ ಜೆ., ಪ್ರಜ್ವಲ್ ಮೊದಲಾದವರು ಉಪಸ್ಥಿತರಿದ್ದರು.