ರಾಮನಗರ : ಹಾಲು ಉತ್ಪಾದಕರ ಸಂಘದ ಮಹಾಸಭೆ

ಶೇರ್ ಮಾಡಿ

ನೇಸರ ಆ.07: ರಾಮನಗರ ಹಾಲು ಉತ್ಪಾದಕರ ಮಹಿಳಾ ಸಹಕಾರದ ಸಂಘದ ಮಹಾಸಭೆಯು ಶನಿವಾರ ನಡೆಯಿತು. ಸಭೆಯ ಅಧ್ಯಕ್ಷತೆ ಸಂಘದ ಅಧ್ಯಕ್ಷೆ ಆಶಾ ಎಸ್ ಜೋಗಿತ್ತಾಯ ವಹಿಸಿದ್ದರು. 2021 22ನೇ ಸಾಲಿನಲ್ಲಿ ಸಂಘವು 11,19,141 ರೂ ಲಾಭಾಂಶಗಳಿಸಿದ್ದು. ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು 5,51,137 ನಿವ್ವಳ ಲಾ`À ಹೊಂದಿರುತ್ತದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಪ್ರತಿ ಲೀಟರ್‌ಗೆ 0.55 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದರು. ಹಾಗೂ ಡಿವಿಡೆಂಟ್ 15 ಪರ್ಸೆಂಟ್ ನೀಡಲಾಗುವುದು ಎಂದು ತಿಳಿಸಲಾಯಿತು. ಕಳೆದ ಬಾರಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯೆಯರ ಮಕ್ಕಳನ್ನು ಅಭಿನಂದಿಸಲಾಯಿತು.
21- 22 ನೇ ಸಾಲಿನಲ್ಲಿ ಅತಿ ಹೆಚ್ಚು ಹಾಲು ಪೂರೈಸಿದ ಮೂವರನ್ನು ಗೌರವಿಸಲಾಯಿತು.
ವರದಿ ಸಾಲಿನಲ್ಲಿ ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೆ ಹಾಲಿನ ಪ್ರಮಾಣಕ್ಕೆ ಅನುಗುಣವಾಗಿ ಪ್ರೋತ್ಸಾಹದ ಬಹುಮಾನ ನೀಡಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪುತ್ತೂರು ವಿಭಾಗದ ಉಪ ವ್ಯವಸ್ಥಾಪಕರಾದಂತಹ ಡಾ.ಸತೀಶ್ ಜಾನುವಾರುಗಳ ನಿರ್ವಹಣೆ ಹಾಗೂ ಹಾಲಿನ ಗುಣಮಟ್ಟದ ಬಗ್ಗೆ ಮಾಹಿತಿ ನೀಡಿದರು. ಸಂಘದ ವಿಸ್ತರಣಾಕಾರಿ ಯಮುನಾ ಒಕ್ಕೂಟದಿಂದ ಸವಲತ್ತುಗಳ ಬಗ್ಗೆ ಹಾಗೂ ಹಾಲಿನ ಗುಣಮಟ್ಟದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸ್ಟೆಪ್ ವಿಭಾಗದ ಅಧಿಕಾರಿ ನಳಿನಿ ಮಹಿಳೆಯರ ಸಬಲೀಕರಣ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಕಮಲ ಲೆಕ್ಕ ಮಂಡಿಸಿದರು. ಉಪಾಧ್ಯಕ್ಷೆ ಅನುಸೂಯಾ ಸ್ವಾಗತಿಸಿ. ಗಾಯತ್ರಿ ಜಿ ಪ್ರಾರ್ಥಿಸಿದರು. ಹೇಮಾವತಿ ಜೆ ವಂದಿಸಿದರು. ಸಹಾಯಕಿ ಗೀತಾ ಹಾಗೂ ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದರು.

Leave a Reply

error: Content is protected !!