ನೇಸರ ಆ.08: ಪಟ್ರಮೆ ಗ್ರಾಮದ ಕೋಡಿಮಜಲು ಎಂಬಲ್ಲಿ ಬಸ್ಸಿನ ಒಂದು ಬದಿಯ ಚಕ್ರ ಸಂಪೂರ್ಣ ಮಣ್ಣಿನೊಳಗೆ ಹೂತು ಹೋಗಿ ಪ್ರಯಾಣಿಕರು ಅದೃಷ್ಟವಶಾತ್ ಪಾರಾದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್ಸಿಗೆ ಕೋಡಿಮಜಲು ಎಂಬಲ್ಲಿ ಪಿಕ್‌ಅಪ್ ಎದುರಾಯಿತು. ಈ ಸಂದರ್ಭ ಸೈಡ್ ನೀಡುವ ಸಲುವಾಗಿ ಬಸ್ಸು ಡಾಮರು ರಸ್ತೆಯಿಂದ ಕೆಳಗಿಳಿದಿದೆ. ತಕ್ಷಣವೇ ಚಕ್ರಗಳು ಮಣ್ಣಲ್ಲಿ ಹೂತುಹೋಗಿದೆ.
ಗ್ರಾಮಸ್ಥರಿಂದ ಕಳಪೆ ಹಾಗೂ ಅವೈಜ್ಞಾನಿಕ ತಡೆಗೋಡೆ ಅಪಘಾತಕ್ಕೆ ಕಾರಣ : ಆರೋಪ
ಕಳೆದ ಅನೇಕ ವರ್ಷಗಳಿಂದ ಕೋಡಿಮಜಲಿನ ಬಳಿ ರಸ್ತೆ ಬದಿ ಕುಸಿದ ಸ್ಥಳದಲ್ಲಿ ತಡೆಗೋಡೆ ಆಗದೆ, ಇದೀಗ ಮೂರು ತಿಂಗಳ ಹಿಂದಷ್ಟೇ ತಡೆಗೋಡೆ ನಿರ್ಮಾಣ ಆಗಿದ್ದಾಗಿದೆ. ಕಾಮಗಾರಿ ಆಗುತ್ತಿರುವಾಗಲೇ ಸದ್ರಿ ಕಾಮಗಾರಿಯು ಅವೈಜ್ಞಾನಿಕವಾಗಿ ನಡೆಯುತ್ತಿರುವುದರ ಬಗ್ಗೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಕಾಮಗಾರಿಯನ್ನು ಕಾಟಚಾರಕ್ಕೆ ಮಾಡಲಾಗಿದ್ದು, ಅಲ್ಲಿನ ಅಪಾಯದ ಬಗ್ಗೆ ಮಾಹಿತಿ ಇದ್ದರೂ ಸಂಬಂಧಿಸಿದ ಇಲಾಖೆ ಒಂದು ಫಲಕವನ್ನೂ ಅಲ್ಲಿ ಹಾಕಲಿಲ್ಲ ಎಂದು ಸಾರ್ವಾಜನಿಕರು ದೂರಿದ್ದಾರೆ.
ಇನ್ನಾದರೂ ಸದ್ರಿ ತಡೆಗೋಡೆಯನ್ನು ಸರಿಪಡಿಸುವ ಕಾರ್ಯಕ್ಕೆ ಇಲಾಖೆ ಮುಂದಾಗಿ, ಸಂಭಾವ್ಯ ಅಪಾಯವನ್ನು ತಪ್ಪಿಸಬೇಕಾಗಿದೆ.