ನೇಸರ ಆ.11: ಶ್ರೀ ರಾಮ ವಿದ್ಯಾಲಯ ಸೂರ್ಯನಗರ ಮತ್ತು ಗ್ರಾಮವಿಕಾಸ ಸಮಿತಿ ನೆಲ್ಯಾಡಿ ಇದರ ವತಿಯಿಂದ ಸೂರ್ಯನಗರದ ಬಳಿಯ ಶೀನಪ್ಪ ಶೆಟ್ಟಿ ಪರಾರಿ ಇವರ ಗದ್ದೆಯಲ್ಲಿ ಅತೀ ವಿಶೇಷವಾಗಿ ಕೆಸರುಗದ್ದೆಯಲ್ಲಿ ಶ್ರೀಕೃಷ್ಣ ಅಷ್ಟಮಿ ಪ್ರಯುಕ್ತ ಕ್ರೀಡಾಕೂಟ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ನವೀನ್ ನೆರಿಯ, ಸಹ ಕಾರ್ಯದರ್ಶಿ ವಿಶ್ವ ಹಿಂದು ಪರಿಷತ್ ಇವರು ಮಾತನಾಡಿ ಮಾತೃ ಭೂಮಿ ಮಾತೃಪ್ರೇಮ, ಭೂಮಿ ತಾಯಿಯ ಆರಾಧನೆ ಮಾಡಿದರೆ ಮಾತ್ರ ಭಾರತೀಯ ಸಂಸ್ಕೃತಿ ವಿರಾಜಮಾನವಾಗಿ ಮೆರೆಯುವುದು ಎಂದು ಹೇಳಿದರು. ವೇದಿಕೆಯಲ್ಲಿ ನಿವೃತ್ತ ಟಪಾಲು ಮೇಲ್ವಿಚಾರಕರಾದ ಪದ್ಮಯ್ಯ ಗೌಡ ತೋಟ ಇವರು ಉಪಸ್ಥಿತರಿದ್ದರು. ಆಡಳಿದ ಮಂಡಳಿಯ ಅಧ್ಯಕ್ಷರಾದ ಡಾ.ಮುರಳೀಧರ ಇವರು ಆಟಗಳ ಒಡನಾಟ ಇದ್ದರೆ, ಸದೃಢ ಆರೋಗ್ಯ ಎಂಬ ಕಿವಿ ಮಾತು ನೀಡಿದರು. ವೇದಿಕೆಯಲ್ಲಿ ಕಾರ್ಯದರ್ಶಿಗಳಾದ ಮೂಲಚಂದ್ರ ಕಾಂಚನ ಹಾಗು ಗ್ರಾಮವಿಕಾಸದ ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಸ್ವಾಗತವನ್ನು ಮುಖ್ಯ ಗುರುಗಳಾದ ಗಣೇಶ್ ವಾಗ್ಗೆ ನೆರೆವೆರಿಸಿದರು, ಶಿಕ್ಷಕ ಅನಿಲ್ ಅಕ್ಕಪ್ಪಾಡಿ ಧನ್ಯವಾದವಿತ್ತರು, ಶ್ರೀಮತಿ ಭಾಗೀರಥಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.
ನಂತರ ಅತಿಥಿಗಳನ್ನು ಶಾಲೆಯಿಂದ ವಿದ್ಯಾಲಯದ ಕುಣಿತ ಭಜನಾ ತಂಡದೊಂದಿಗೆ ಮೆರವಣಿಗೆಯಲ್ಲಿ ಕೆಸರು ಗದ್ದೆ ಕ್ರೀಡಾಂಗಣಕ್ಕೆ ಬರಮಾಡಿಕೊಳ್ಳಲಾಯಿತು. ಅತಿಥಿಗಳು ಗದ್ದೆಗೆ ಹಾಲೆರೆಯುವ ಮೂಲಕ ಸಾಂಪ್ರದಾಯಿಕವಾಗಿ ಕ್ರೀಡಾ ಕೂಟವನ್ನು ಉದ್ಘಾಟಿಸಲಾಯಿತು. ಕ್ರೀಡಾಕೂಟದಲ್ಲಿ ಸುರೇಶ ಪಡಿಪಂಡ ನಿರೂಪಣೆಯಲ್ಲಿ ಸಾಗಿದರೆ, ಶ್ರೀಯತ ರಾಜೇಶ್ ಕಡಬರವರ ನಿರ್ಣಯವು ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿತ್ತು. ಕಾರ್ಯಕ್ರಮದಲ್ಲಿ ಇದ್ದ ಶಿಸ್ತು ಮತ್ತು ಸಮಯಪ್ರಜ್ಞೆ ಅಚ್ಚುಕಟ್ಟುತನ ಅದಕ್ಕೆ ಶೋಭೆ ಹೆಚ್ಚಿಸಿತು. ಕಾರ್ಯಕ್ರಮದುದ್ದಕ್ಕು ಭಾರತ ಮಾತೆಗೆ ಜೈಕಾರ ಮುಗಿಲು ಮುಟ್ಟಿತ್ತು.