ಕಡಬ:ಇಚಿಲಂಪಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ್ ಮಹೋತ್ಸವ

ಶೇರ್ ಮಾಡಿ

ನೇಸರ ಆ:18 ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ನಡೆದ “ಸ್ವಾತಂತ್ರ್ಯದ ಅಮೃತ್ ಮಹೋತ್ಸವ 2022 ” ದಿನಾಂಕ 15 -08 -2022 ನೇ ಸೋಮವಾರದಂದು ನಡೆದ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಶಶಿಧರ. ಪಿ ಅವರು ಧ್ವಜಾರೋಹಣ ನೆರವೇರಿಸಿದರು.ಆ ಸಂಧರ್ಭದಲ್ಲಿ ಉಪಾಧ್ಯಕ್ಷೆ ಶ್ರೀಮತಿ ನಂದ. ಪಿ. ಪಾದೆ ಹಾಗೂ ಸಮಿತಿಯ ಏಲ್ಲಾ ಸದಸ್ಯರು ಉಪಸ್ಥಿತರಿದ್ದರು . ಹಳೆವಿದ್ಯಾರ್ಥಿಗಳು ,ಪೋಷಕರು ಹಾಗೂ ಊರಿನ ವಿದ್ಯಾಭಿಮಾನಿಗಳು ಸೇರಿ ಶಾಲೆಯಿಂದ ಇಚ್ಲಂಪಾಡಿ ಪೇಟೆಯವರೆಗೂ ಮೆರವಣಿಗೆ ನಡೆಸಲಾಯಿತು .ಪೇಟೆಯಲ್ಲಿ ಅಂಗಡಿಯ ಮಾಲಕರಾದ ಕೇಶವ ಗೌಡ ಅಲೆಕ್ಕಿ ,ಚಂದ್ರಶೇಖರ ಗೌಡ ಓಡ್ಯತ್ತಡ್ಕ,ರವಿ ಬಿಜೇರು,ಪೂವಪ್ಪ ಗೌಡ ,ಇಬ್ರಾಹಿಂ ,ಶ್ರೀನಿವಾಸ ಪೂಜಾರಿ ,ಉಷಾ ರೈ,ಅಮಿತಾ ,ಯೋಗೀಶ್ ಗೌಡ ಹಾಗೂ ಗ್ರಾಮ ಪಂಚಾಯತಿನ ವತಿಯಿಂದ ನೆರೆದ ಎಲ್ಲರಿಗೂ ಸಿಹಿತಿಂಡಿಯ ವ್ಯವಸ್ಥೆಯನ್ನು ಮಾಡಿದರು. ನಾನಾ ವೇಷಭೂಷಣಗಳಿಂದ ಮಿಂಚುತ್ತಿದ್ದ ಮಕ್ಕಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

 

ತದನಂತರ ಶಾಲೆಯಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು .ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ ಎಸ್ ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮಪಂಚಾಯತ್ ಸದಸ್ಯರಾದ ಕುರಿಯಾಕೋಸ್ ,ಡೈಸಿವರ್ಗೀಸ್ ,ರತ್ನಾವತಿ ,ಸಂಧ್ಯಾ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಭಾಸ್ಕರ . ಎಸ್. ಗೌಡ ,ಕೆ. ಟಿ .ವಲ್ಸಮ್ಮ ಉಪಸ್ಥಿತರಿದ್ದರು .
ಎಸ್.ಡಿ.ಎಂ.ಸಿ ಅಧ್ಯಕ್ಷರು ಸಭಾಧ್ಯಕ್ಷತೆಯನ್ನು ವಹಿಸಿದರು.ಶಾಲೆಯ ಅಭಿವೃದ್ದಿಗಾಗಿ ಶ್ರಮಿಸಿದ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಶಾಂತಾರಾಮ್ ಕುಡಾಲ,ಶಾಲೆಯ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಿದ ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್ ಪರವಾಗಿ ಕಾರ್ಯದರ್ಶಿ ಸುಜಿತ್ ,ಏಳು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಉಚಿತವಾಗಿ ವಿತರಿಸಿದ ದೇವಿಪ್ರಸಾದ್ ,ವಿಜುಕುಮಾರ್ ,ಮೆಸ್ಕಾಂನ ಲೈನ್ ಮಾನ್ ಸಂಜು ಹಾಗೂ ಅಕ್ಷರ ದಾಸೋಹದ ನಿವೃತ ಸಿಬ್ಬಂದಿ ಶ್ರೀಮತಿ ಗೀತಾಶ್ರೀ ಶೆಟ್ಟಿ ,ಭಾರತೀಯ ಭೂಸೇನೆಯಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಸಂತೋಷ್ ಗೌಡ ನೇರ್ಲ ಇವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು .

ಜಿಲ್ಲಾ ಮಟ್ಟದಲ್ಲಿ ಚೆಸ್ ಸ್ಪರ್ಧೆಯಲ್ಲಿ ವಿಜೇತರಾದ ರೇಷ್ಮಾ ,ಸಾನ್ವಿ ಇವರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಏನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಮೃತ ಮಹೋತ್ಸವದಲ್ಲಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು .ಶ್ರೀಮತಿ ಜ್ಯೋತಿ (ಸಹಶಿಕ್ಷಕಿ )ಎಲ್ಲರಿಗೂ ಧನ್ಯವಾದ ಹೇಳಿದರು.ಶ್ರೀಮತಿ ಸುಜಾತಾ ಕಾರ್ಯಕ್ರಮ ನಿರೂಪಣೆ ಮಾಡಿದರು .ಶ್ರೀಮತಿ ಜಯ .ಕೆ ,ಗಿರೀಶ್ ಎಂ .ಇವರು ಸನ್ಮಾನಿತರ ಪರಿಚಯ ಮಾಡಿದರು. ಆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲಾವತಿಯಿಂದ ಮದ್ಯಾಹ್ನ ಊಟದ ವ್ಯವಸ್ಥೆ ಮಾಡಲಾಯಿತು.

🌸ಜಾಹೀರಾತು🌸

Leave a Reply

error: Content is protected !!