ಸಮಾಜದೊಂದಿಗೆ ಬದುಕುವಾಗಲು ಶಿಕ್ಷಣದ ಅರಿವು ಹಾಗೂ ಸಂಸ್ಕಾರಗಳ ಅರಿವಿರಲಿ – ಡಾ. ದೇವಿ ಪ್ರಸಾದ್ ಬೊಳ್ಮಾ

ಶೇರ್ ಮಾಡಿ

ನೇಸರ ಆ.21: ಶಿಕ್ಷಣ ಮತ್ತು ಸಂಸ್ಕಾರವು ಶಾಲೆಯೊಳಗೆ ಮಾತ್ರ ಸೀಮಿತವಾಗದಿರಲಿ. ಸಮಾಜದೊಂದಿಗೆ ಬದುಕುವಾಗಲು ಶಿಕ್ಷಣದ ಅರಿವು ಹಾಗೂ ಸಂಸ್ಕಾರಗಳ ಅರಿವಿರಲಿ. ಶಿಕ್ಷಣ ಎಲ್ಲಾ ಸಂಸ್ಥೆಗಳು ನೀಡುತ್ತವೆ. ಆದರೆ ಸಂಸ್ಕಾರಯುಕ್ತ ಶಿಕ್ಷಣವನ್ನು ಗ್ರಾಮೀಣ ಭಾಗವಾದ ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ನೀಡುತ್ತಿರುವುದು ಶ್ಲಾಘನೀಯ ಎಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಡಾ. ದೇವಿ ಪ್ರಸಾದ್ ಬೊಳ್ಮಾ ಹೇಳಿದರು.


ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀರಾಮ ಪ್ರೌಢಶಾಲೆ, ಪಟ್ಟೂರು ಇದರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ 2022ನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಕ್ಷೇತ್ರ ಸೌತಡ್ಕದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ತೋಡ್ತಿಲ್ಲಾಯ ಮಾತನಾಡಿ, ಯೋಗ ಮನುಷ್ಯನ ಸರ್ವ ಅಭಿವೃದ್ಧಿಗೂ ಪೂರಕ, ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗದಿರಲಿ ಪ್ರತಿನಿತ್ಯವೂ ನಮ್ಮ ಜೀವನ ಪಾಠವಾಗಿರಲಿ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಗೌಡ ಧರ್ಮದಕಳ ವಹಿಸಿದ್ದರು.

ಶಾಲಾ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ವಂದಿಸಿದರು. ಶಿಕ್ಷಕಿ ಸ್ವಾತಿ ಕೆ.ವಿ ನಿರೂಪಿಸಿದರು. ವೇದಿಕೆಯಲ್ಲಿ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯದರ್ಶಿ ರಮೇಶ್ ಕೆ, ಶಾಲಾ ಆಡಳಿತ ಮಂಡಳಿ ಸಸ್ಯರಾದ ಕೊರಗಪ್ಪ ಶೆಟ್ಟಿ ಮುಂಡ್ರೇಲು, ರಾಜೇಶ್ ರೈ ಪರಾರ್ತಿಮಾರು, ಕಿರಣ್ ಬಲ್ಯಾಯ ಉಪಸ್ಥಿತರಿದ್ದರು.
ಯೋಗ ಸ್ಪರ್ಧೆಯು ಬಾಲ ವರ್ಗ, ಕಿಶೋರ್ ವರ್ಗ, ತರುಣ ವರ್ಗ ವಿಭಾಗಗಳಲ್ಲಿ ನಡೆದಿದ್ದು, 320 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು.

Leave a Reply

error: Content is protected !!