ನಾವೂರು ಗ್ರಾ.ಪಂ. ಕಾಮಗಾರಿಗಳ ಉದ್ಘಾಟನೆ: 247 ಸಾಧಕರಿಗೆ ಸನ್ಮಾನ

ಶೇರ್ ಮಾಡಿ

ನೇಸರ ಆ.24: ತೀರಾ ಹಳ್ಳಿಯಾಗಿದ್ದ ನಾವೂರು ಗ್ರಾಮವನ್ನು ಅನೇಕ ಯೋಜನೆಗಳ ಅನುಷ್ಠಾನದ ಮೂಲಕ ಅಭಿವೃದ್ಧಿಯ ಹಳಿಗೆ ತರಲಾಗಿದೆ. ಇದಕ್ಕೆ ಗ್ರಾ.ಪಂ. ಆಡಳಿತ ವರ್ಗದ ಇಚ್ಛಾಶಕ್ತಿ ಹಾಗೂ ಊರ ಜನತೆಯ ಸಹಕಾರವು ಕಾರಣವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಸ್ವಾತಂತ್ರ್ಯದ ಆಮೃತಮಹೋತ್ಸವದ ಹಿನ್ನೆಲೆಯಲ್ಲಿ ನಾವೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಮ್ಮಿಕೊಂಡ ನಾನಾ ಕಾಮಗಾರಿಗಳ ಉದ್ಘಾಟನೆ ಹಾಗೂ 75 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಿ ನಾವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಎಂ.ಎಲ್.ಸಿ. ಕೆ.ಹರೀಶ್ ಕುಮಾರ್ ಮಾತನಾಡಿ, ಎಲ್ಲರನ್ನು ಒಗ್ಗೂಡಿಸಿ ಸಮಾಜವನ್ನು ಮುನ್ನಡೆಸಬೇಕಾದ ಅವಶ್ಯಕತೆ ಇದೆ. ಹಾಗಾದಲ್ಲಿ ಎಲ್ಲ ಸಮುದಾಯಗಳ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

NESARA|| WhatsApp ||GROUPS

                             

 

                                                       

 

ಗ್ರಾ.ಪಂ.ಅಧ್ಯಕ್ಷ ಗಣೇಶ್ ಗೌಡ, ಉಪಾಧ್ಯಕ್ಷೆ ಸುನಂದಾ, ಡಾ.ಪ್ರದೀಪ್‌ ಎ., ನಿವೃತ್ತ ಪ್ರಿನ್ಸಿಪಾಲ್ ಟಿ.ಪಿ. ಆಂಟನಿ, ನರೇಗಾ ಜಿಲ್ಲಾ ಸಂಯೋಜಕರಾದ ರಕ್ಷಿತ್ ಜೈನ್, ನಾವೂರು ಮಸೀದಿಯ ಧರ್ಮಗುರು ಆಲಿ ಕುಂಞ ಸಖಾಫಿ, ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲಿಯಾನ್, ನವೋದಯ ಯುವಕ ಮಂಡಲ ಅಧ್ಯಕ್ಷ ಹರೀಶ್ ಕಾರಿಂಜ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಫ್ರಾನ್ಸಿಸ್ ಮೊರಸ್ ಮುರ, ಸಿಡಿಪಿಒ ಪ್ರಿಯಾ ಆಗ್ನೇಸ್ ಚಾಕೊ, ಪಿಡಿಒ ವೆಂಕಟಕೃಷ್ಣ ರಾಜ್, ಕಾರ್ಯದರ್ಶಿ ಮೋನಮ್ಮ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೋಹಿಣಿ, ಗ್ರಾ.ಪಂ.ಸದಸ್ಯರಾದ ವೇದಾವತಿ, ಮಮತಾ, ಶಾಂತಿ, ಬಾಲಕೃಷ್ಣ, ಹಸೈನಾರ್, ಪ್ರಮುಖರಾದ ಉಮೇಶ್ ಅತ್ಯಡ್ಕ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಉಮೇಶ್ ಪ್ರಭು ಉಪಸ್ಥಿತರಿದ್ದರು. ಒಟ್ಟು247 ಮಂದಿಯನ್ನು ಗೌರವಿಸಲಾಯಿತು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ, ಶಾಲಾ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆದ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ, ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳಿಗೆ ನರೇಗಾದಡಿ ಕಾಮಗಾರಿ ಆದೇಶ ಪತ್ರ ವಿತರಿಸಲಾಯಿತು.

ಉದ್ಘಾಟನೆಗೊಂಡ ಕಾಮಗಾರಿಗಳು

ನಾವೂರು ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆ,ಕೈಕಂಬ ಬಸ್ಸು ತಂಗುದಾಣದಲ್ಲಿ ಪುಸ್ತಕ ಗೂಡು ಉದ್ಘಾಟನೆ, ನಾವೂರು ಪೇಟೆಯಿಂದ ಬೋಂಟ್ರಪಾಲು ಕಾಂಕ್ರೀಟ್ ರಸ್ತೆ ಉದ್ಘಾಟನೆ, ಕೈಕಂಬದಲ್ಲಿ ನವೀಕರಿಸಿದ ಉಪ ಆರೋಗ್ಯ ಕೇಂದ್ರ ಮತ್ತು ವಸತಿ ಗೃಹ ಕಾಮಗಾರಿ,ನಾವೂರು ಸ.ಹಿ.ಪ್ರಾ.ಶಾಲೆಯ ಇಂಟರ್‌ಲಾಕ್, ಮೇಲ್ಛಾವಣಿಗೆ ಶೀಟ್ ಅಳವಡಿಕೆ,ನಾವೂರು ಜನತಾ ಕಾಲೋನಿ ಭಜನಾ ಮಂದಿರ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!