ನೇಸರ ನ 30 : ಲತೇಶ್ ಯಕ್ಷಗಾನ ನಾಟ್ಯ ಕಲಾಸಂಘ ಅರಸಿನಮಕ್ಕಿ ಇದರ 3ನೇ ವರುಷದ ವಾರ್ಷಿಕೋತ್ಸವದ ಸಮಾರಂಭ ದಿನಾಂಕ 28-11-2021ನೇ ಭಾನುವಾರದಂದು ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿಯಲ್ಲಿ ನಡೆಯಿತು.
ವಿದ್ಯಾರ್ಥಿಗಳಿಂದ ಭರತನಾಟ್ಯ,ಕಲಾಕೇಂದ್ರದ ವಿದ್ಯಾರ್ಥಿಗಳಿಂದ “ಮಹಿಷ ಮರ್ದಿನಿ – ಕದಂಬ ಕೌಶಿಕೆ” ಯಕ್ಷಗಾನ ಪ್ರದರ್ಶನವನ್ನು ಯಕ್ಷಗುರು ಸುಂದರ ಗೌಡ ಅರಸಿನಮಕ್ಕಿ ನಡೆಸಿಕೊಟ್ಟರು.ಬಳಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮರಾಜ್ ಗೌಡ ಅಡ್ಕಾಡಿ ಅಧ್ಯಕ್ಷತೆ ವಹಿಸಿದ್ದರು, ವರದಶಂಕರ ದಾಮ್ಲೆ ಯಕ್ಷಗಾನ ಕಲಾವಿದ, ಕಲಾಪೋಷಕ ವಾಮನ್ ತಾಮನ್ ಕರ್, ಗಂಗಾಧರ ಕುಲಾಲ್, ಕೃಷ್ಣಪ್ಪ ಕುಲಾಲ್, ಶ್ರೀಮತಿ ಜಯಂತಿ, ವೃಷಾಂಕ್ ಮೊದಲಾದವರು ಉಪಸ್ಥರಿದ್ದರು.
ಸುಂದರ ಗೌಡರ ಶ್ರಮ ಶ್ಲಾಘನೀಯವಾಗಿದೆ, ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ನೀಡಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವುದು ಮೆಚ್ಚುವಂತಹದ್ದು ಕಲಾಕೇಂದ್ರ ಇನ್ನೂ ಉತ್ತಮವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಹಿರಿಯ ಯಕ್ಷಗಾನ ಚೆಂಡೆ-ಮದ್ದಲೆ ವಾದಕ ಪದ್ಮಯ್ಯ ಗೌಡ ಶಿಶಿಲರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಲೋಲಾಕ್ಷಿ ಶಿಬಾಜೆಯವರ “ಸಂಗಮ ಸಾಮಾಜಿಕ” ಕಾದಂಬರಿಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು ನಂತರ ಕಲಾಕೇಂದ್ರದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮವಸ್ತ್ರ ವಿತರಣೆ ಮಾಡಲಾಯಿತು ಹಾಗು ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲಾ ಕಲಾವಿದರನ್ನು ಗೌರವಿಸಲಾಯಿತು.
ದಿವಂಗತ ಜಗನ್ನಾಥ ಗೌಡ ಅಡ್ಕಾಡಿ ಅವರ ಸವಿನೆನಪಿಗಾಗಿ ಧರ್ಮರಾಜ್ ಗೌಡ ಮತ್ತು ಮನೆಯವರು ಸುಮಾರು 50 ಸಾವಿರ ಮೌಲ್ಯದ ಯಕ್ಷಗಾನ ಹಿಮ್ಮೇಳದ ಪರಿಕರಗಳನ್ನು ಕೇಂದ್ರಕ್ಕೆ ನೀಡಿದರು.ಕೊನೆಯಲ್ಲಿ ಕಲಾಕೇಂದ್ರದ ಯಕ್ಷಗಾನ ಗುರುಗಳಾದ ಸುಂದರ ಗೌಡ ಎಲ್ಲರಿಗೂ ನೆನಪಿನ ಕಾಣಿಕೆ ನೀಡಿದರು. ಮಾಲತಿ ಸ್ವಾಗತಿಸಿ,ಲೋಕೇಶ್ ಶಿಬಾಜೆ ನಿರೂಪಿಸಿದರು.