ನೇಸರ ಆ.29: ಕ್ಲಸ್ಟರ್ ಮಟ್ಟದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಪುತ್ತೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸಗದ್ದೆಯಲ್ಲಿ ನಡೆಯಿತು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿಯ ಕಾಂಚನ ಶ್ರೀ ಲಕ್ಷ್ಮೀ ನಾರಾಯಣ ಹಿರಿಯ ಪ್ರಾಥಮಿಕ ಶಾಲೆಯು ಕಿರಿಯ ಮತ್ತು ಹಿರಿಯ ವಿಭಾಗದ ಪ್ರತಿಭಾ ಕಾರಂಜಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಹಿರಿಯರ ವಿಭಾಗದಲ್ಲಿ ಗೌತಮ್(ಚಿತ್ರ ಕಲೆ ಪ್ರಥಮ), ಹರ್ಷ(ಕ್ಲೇ ಮಾಡೆಲಿಂಗ್ ಪ್ರಥಮ), ಅಶ್ವಿನಿ(ಆಶುಭಾಷಣ ಪ್ರಥಮ), ಚರಣ್,(ಕಥೆ ಹೇಳುವುದು ಪ್ರಥಮ), ಶಿಲ್ಪ(ಇಂಗ್ಲೀಷ್ ಕಂಠಪಾಠ ದ್ವಿತೀಯ), ಕೀರ್ತನಾ(ಕನ್ನಡ ಕಂಠಪಾಠ ತೃತೀಯ), ಮಾನಸ(ಅಭಿನಯಗೀತೆ ಮತ್ತು ಭಾಷಣ ತೃತೀಯ), ನಿತೇಶ್ (ಭಕ್ತಿ ಗೀತೆ ತೃತೀಯ). ಕಿರಿಯರ ವಿಭಾಗದಲ್ಲಿ ಶ್ರೀ ಕೃಷ್ಣ (ಧಾರ್ಮಿಕ ಪಠಣ ಪ್ರಥಮ), ಶನ್ವಿ (ಆಶುಭಾಷಣ ಪ್ರಥಮ), ಶ್ರಾವ್ಯ (ಲಘ ಸಂಗೀತ ಪ್ರಥಮ), ಖುಷಿ (ಅಭಿನಯ ಗೀತೆ ದ್ವಿತೀಯ), ಶನ್ವಿ (ಕಥೆ ಹೇಳುವುದು ದ್ವಿತೀಯ), ಅಕ್ಷಯ್ (ಭಕ್ತಿ ಗೀತೆ ದ್ವಿತೀಯ), ಪೂರ್ವಿ (ಛದ್ಮವೇಷ ತೃತೀಯ) ಸ್ಥಾನ ಪಡೆದಿದ್ದಾರೆ.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಲಕ್ಷಣ್ ಗೌಡ ಮತ್ತು ಶಿಕ್ಷಕ ವೃಂದವರು ಮಾರ್ಗದರ್ಶನ ನೀಡಿರುತ್ತಾರೆ.