ನೆಲ್ಯಾಡಿ: ಸೇತುವೆಯಿಂದ ಕಂದಕಕ್ಕೆ ಉರುಳಿದ ಇನ್ನೋವಾ ಕಾರು

ಶೇರ್ ಮಾಡಿ

ನೇಸರ ಸೆ.01: ಕಡಬ ತಾಲೂಕು ಕೊಕ್ರಾಡಿ ಗ್ರಾಮದ ಕಟ್ಟೆಮಜಲು ಎಂಬಲ್ಲಿ ಇನ್ನೋವಾ ಕಾರು ಕಂದಕಕ್ಕೆ ಉರುಳಿದ ಘಟನೆ ಆ.31ರ ಸಂಜೆ ಸಂಜೆ ನಡೆದಿದೆ.
ಕಾರಿನಲ್ಲಿ ಇಬ್ಬರು ಮಹಿಳೆಯರು ಸೇರಿ ಒಟ್ಟು ನಾಲ್ಕು ಜನ ಪ್ರಯಾಣಿಸುತ್ತಿದ್ದು, ಪ್ರಯಾಣಿಕರನ್ನು ರಜನೀಶ್, ಭವಿತಾ, ಚೇತನಾ ಮತ್ತು ದಯಾನಂದ ಎಂದು ಗುರುತಿಸಲಾಗಿದೆ.

ಸಂಜೆ ನೆಲ್ಯಾಡಿಯ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಕಟ್ಟೆಮಜಲು ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಕಾರು ಕಟ್ಟೆಮಜಲು ನಿವಾಸಿ ರಜನೀಶ್ ಎಂಬವರಿಗೆ ಸೇರಿದ್ದಾಗಿದ್ದು.
ಘಟನೆಯಲ್ಲಿ ರಜನೀಶ, ಚೇತನ ಹಾಗೂ ಭವಿತಾ ಗಾಯಗೊಂಡಿದ್ದಾರೆ.

Leave a Reply

error: Content is protected !!