ನೇಸರ ಸೆ.01: ಹಿಂದೂ ಧರ್ಮ ಎಂಬುದು ಜಗತ್ತಿನ ಸನಾತನ ಧರ್ಮದಲ್ಲಿ ಅತ್ಯಂತ ಶ್ರೇಷ್ಠವಾದ ಧರ್ಮ. ದೇವರನ್ನು ನಾವು ಬೇರೆ ಬೇರೆ ಹೆಸರುಗಳಿಂದ ಆರಾಧಿಸುತ್ತೇವೆ. ಭಜನೆ ಮಾಡುವುದರಿಂದ ದೇವರನ್ನು ಕಾಣಬಹುದು.ನಮಗೆ ತಾಯಿ ಮೊದಲ ದೇವರು, ತಂದೆ ಎರಡನೇ ದೇವರು, ಗುರುಗಳು ಮೂರನೇ ದೇವರು ಹಾಗೆಯೇ ಅತಿಥಿಗಳನ್ನು ದೇವರಂತೆ ಕಾಣುತ್ತೇವೆ. ಹಿಂದೂ ಸಂಪ್ರದಾಯದಲ್ಲಿ ಶ್ರದ್ಧಾ ಭಾವನೆಯಿಂದ ಗಣಪತಿಯನ್ನು ಆರಾಧನೆ ಮಾಡಿದರೆ ನಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ ಹಾಗೂ ಮನಸ್ಸನ್ನು ಹತೋಟಿಯಲ್ಲಿ ಇಡಲು ಸಾಧ್ಯವಾಗುತ್ತದೆ. ಎಲ್ಲಾ ಗಣಗಳಿಗೆ ಅಧಿಪತಿ ನಾಯಕ ಗಣೇಶ. ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುವ ದೇಶ ಭಾರತ ದೇಶವಾಗಿದೆ ಎಂಬುದಾಗಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ- ಕೌಕ್ರಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೆಲ್ಯಾಡಿ- ಕೌಕ್ರಾಡಿ ಇವರ 40ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.31ರಂದು ಶ್ರೀ ಶಬರೀಶ ಕಲಾಮಂದಿರ ನೆಲ್ಯಾಡಿ- ಕೌಕ್ರಾಡಿಯಲ್ಲಿ ನಡೆಯಿತು.
ಇದರ ಧರ್ಮ ಜಾಗೃತಿ ಸಭೆ ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಅಡ್ಯಂತಾಯ, ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಪ್ರ. ಶಿಕ್ಷಣ ಪ್ರಮುಖ್ ರವರು ಧಾರ್ಮಿಕ ಉಪನ್ಯಾಸ ನೀಡುವುದರ ಮೂಲಕ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಸಂಜೀವ ಪೂಜಾರಿ, ಮ್ಹಾಲಕರು ಹೋಟೆಲ್ ಬಿರ್ವ ಹೊಸಮಜಲು ನೆಲ್ಯಾಡಿ ನೆರವೇರಿಸಿ ಮಾತನಾಡಿದ ಅವರು ಹಿಂದುಗಳಲ್ಲಿ ಸಂಘಟನೆ ಕಡಿಮೆಯಾಗಿದೆ. ಧಾರ್ಮಿಕ ವಿಚಾರದಲ್ಲಿ ನಾವೆಲ್ಲ ಒಂದಾಗಿರಬೇಕು. ಒಂದೇ ಜಾತಿ, ಒಂದೇ ಮತ ಎಂಬುದು ನೂರು ವರುಷಗಳಿಂದಲೂ ಹೇಳಿಕೊಂಡು ಬರುತ್ತಿದ್ದೇವೆ. ಜಾತಿ, ಮತ, ಭೇದ ಬಿಟ್ಟು ನಾವೆಲ್ಲ ಒಂದಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ದೇವಾಡಿಗ, ಅಧ್ಯಕ್ಷರು ಶ್ರೀ ಮಾಯಿಲಕೋಟೆ ದೈವ ಸನ್ನಿಧಿ, ವಿಜೇಶ್ ಜೈನ್, ನೆಲ್ಯಾಡಿ ವಲಯ ಮೇಲ್ವಿಚಾರಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಸಭಾಧ್ಯಕ್ಷತೆಯನ್ನು ನವೀನ್ ಕೊಪ್ಪ ಶ್ರೀ ಕಟೀಲ್, ಅಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೆಲ್ಯಾಡಿ-ಕೌಕ್ರಾಡಿ ವಹಿಸಿದ್ದರು. ವೇದಿಕೆಯಲ್ಲಿ ಡಾ.ಸದಾನಂದ ಕುಂದರ್ ಅಧ್ಯಕ್ಷರು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ -ಕೌಕ್ರಾಡಿ, ಶ್ರೀ ಕೃಷ್ಣಪ್ಪ ಕೆ ನಿಡ್ಡೋಡಿ ಹಳೆ ಮುಂಡ್ಲ, ಉಪಾಧ್ಯಕ್ಷರು, ಮೋಹನ ಗೌಡ ಕಟ್ಟೆಮಜಲು, ಕಾರ್ಯದರ್ಶಿ, ರಕ್ಷಿತ್ ಮಡಿವಾಳ ಜೊತೆ ಕಾರ್ಯದರ್ಶಿ, ದಯಾನಂದ. ಕೆ, ಆದರ್ಶ ಕೋಶಾಧಿಕಾರಿ ಉಪಸ್ಥಿತರಿದ್ದರು.
ವೈದಿಕ ಕಾರ್ಯಕ್ರಮ :
ಸುರೇಶ್ ಮುಚ್ಚಿಂತ್ತಾಯ ಪ್ರಧಾನ ಅರ್ಚಕರು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ- ಕೌಕ್ರಾಡಿ ಹಾಗೂ ಶ್ರೀಧರ ನೂಜಿನ್ನಾಯ, ಪ್ರಧಾನ ಅರ್ಚಕರು ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಹಾರ್ಪಳ ಇವರ ಪೌರೋಹಿತ್ಯದಲ್ಲಿ ಬೆಳಗ್ಗೆ ಗಂಟೆ 6ಕ್ಕೆ ಶ್ರೀ ಗಣಪತಿ ದೇವರ ಪ್ರತಿಷ್ಠೆ. 8.30ಕ್ಕೆ ಅಯ್ಯಪ್ಪ ಸ್ವಾಮಿ ದೇವರಿಗೆ ಸೀಯಾಳಾಭಿಷೇಕ. 9ಕ್ಕೆ ಗಣಹೋಮ. 9 ರಿಂದ 10:30 ರವರೆಗೆ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಬಲ್ಯ ನೆಲ್ಯಾಡಿ ಇವರಿಂದ ಭಜನಾ ಕಾರ್ಯಕ್ರಮ. 10:30 ರಿಂದ 11ರವರೆಗೆ ಐ ಐ ಸಿ ಟಿ ಸಂಗೀತ ಕಲಾ ಕೇಂದ್ರ ನೆಲ್ಯಾಡಿ ಇವರಿಂದ “ಭಕ್ತಿ ಗಾಯನ”. ಮಧ್ಯಾಹ್ನ 1 ರಿಂದ ಶ್ರೀಮತಿ ಸುರೇಖಾ ಮತ್ತು ಶಿಷ್ಯ ವೃಂದದವರಿಂದ “ಭರತನಾಟ್ಯ” ಕಾರ್ಯಕ್ರಮ. ಅಪರಾಹ್ನ 2.00 ರಿಂದ ಕುಸಾಲ್ದ ಕಿಚ್ಚ ಬರವುದ ಮಾಣಿಕ್ಯ ಕೇಶವ ನೆಲ್ಯಾಡಿ ತಂಡದಿಂದ “ಭಕ್ತಿ ರಸಮಂಜರಿ” ಗಾನ ಲೋಕದ ಗಾಯಕರಿಂದ ಗಾನ ಸುಧೆ. ಅಪರಾಹ್ನ ಗಂಟೆ 3 ರಿಂದ ಶ್ರೀ ಗಣಪತಿ ದೇವರ ಭವ್ಯ ಶೋಭಾ ಯಾತ್ರೆ ನೆರವೇರಿತು.
ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ನಡೆದ ಆಟೋಟ ಸ್ಪರ್ಧೆಗಳ ವಿಜೇತರಿಗೆ ವಿತರಿಸಲಾಯಿತು.
ಪ್ರಾರ್ಥನೆ ಅಶ್ವತ್ ಆಚಾರ್ ಜಾಲುಮನೆ. ದಯಾನಂದ ಕೆ ಆದರ್ಶ ಸ್ವಾಗತಿಸಿದರು. ಗುಡಪ್ಪ ಬಲ್ಯ ಕಾರ್ಯಕ್ರಮ ನಿರೂಪಿಸಿದರು.