ನೇಸರ ಡಿ1 : ನೆಲ್ಯಾಡಿಯ ಸಂತ ಜಾರ್ಜ್ ಪದವಿಪೂರ್ವ ಕಾಲೇಜುನ ಎನ್ಎಸ್ಎಸ್ ಘಟಕದ ವತಿಯಿಂದ “ವಿಶ್ವ ಏಡ್ಸ್ ದಿನಾಚರಣೆ” ಯನ್ನು ಆಚರಿಸಲಾಯಿತು. ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕ ಅಬ್ರಹಾಂ ವರ್ಗೀಸ್ ರವರ ನಿರ್ದೇಶನದಂತೆ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಕಾಲೇಜಿನ ಪ್ರಾಚಾರ್ಯರಾದ ಏಲಿಯಾಸ್ ಎಂ.ಕೆ ವಿದ್ಯಾರ್ಥಿಗಳಲ್ಲಿ ಹೆಚ್ಐವಿ ಏಡ್ಸ್ ನ ಬಗ್ಗೆ ಜಾಗೃತಿ ಮೂಡಿಸಿದರು. ಎನ್ಎಸ್ಎಸ್ ನ ಕಾರ್ಯಕ್ರಮ ಅಧಿಕಾರಿ ವಿಶ್ವನಾಥ ಶೆಟ್ಟಿ.ಕೆ ಮಾತನಾಡುತ್ತಾ ಇಂದಿನ ಯುವ ಶಕ್ತಿಯೇ ನಮ್ಮ ದೇಶದ ಸಂಪತ್ತು ಯುವಕರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಿ ಆರೋಗ್ಯವಂತ ಸ್ವಚ್ಛಂದ ಜೀವನವನ್ನು ಹೊಂದುವುದರಿಂದ ನಮ್ಮ ದೇಶದ ಸಂಪತ್ತು ವೃದ್ಧಿಯಾಗುವುದು ಎಂದು ನುಡಿದರು.
ಎನ್ಎಸ್ಎಸ್ ಘಟಕ ನಾಯಕ ವಿನೀತ್ ಮಂತೆರೋ ಸ್ವಾಗತಿಸಿದರು. ಎನ್ಎಸ್ಎಸ್ ಘಟಕ ನಾಯಕಿ ಭವಿಷ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಸ್ವಯಂಸೇವಕರು,ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹೆಚ್ಐವಿ ಏಡ್ಸ್ ನ ಬಗ್ಗೆ ಕ್ವಿಜ್ ಕಾರ್ಯಕ್ರಮವನ್ನು ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.