ನೆಲ್ಯಾಡಿ ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ-ಹಾರ್ಪಳ : “ಕೆಸರ್ ಡೊಂಜಿ ಗೌಜಿ” ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

ಶೇರ್ ಮಾಡಿ

ನೇಸರ ಡಿ2: ನೆಲ್ಯಾಡಿ ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ-ಹಾರ್ಪಳ ಇದರ ವತಿಯಿಂದ ನಡೆಯಲಿರುವ “ಕೆಸರ್ ಡೊಂಜಿ ಗೌಜಿ” ಕೆಸರುಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಮನರಂಜನಾ ಕ್ರೀಡೆ ಮತ್ತು ಗ್ರೇಡ್ ಮಾದರಿ ಕೆಸರುಗದ್ದೆ ಹಗ್ಗಜಗ್ಗಾಟ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದಿ 01/12/21ರದಂದು ನಡೆಯಿತು.
ದಿನಾಂಕ 05-12-21ನೇ ಆದಿತ್ಯವಾರದಂದು ಬೆಳಗ್ಗೆ 8.30 ರಿಂದ ಶಾಸ್ತಾರೇಶ್ವರ ದೇವಸ್ಥಾನ ಕೆಸರುಗದ್ದೆಯಲ್ಲಿ ಕ್ರೀಡಾಕೂಟ ನಡೆಯಲಿದ್ದು ಆಮಂತ್ರಣ ಪತ್ರಿಕೆಯನ್ನು ನೆಲ್ಯಾಡಿಯ ಉದ್ಯಮಿ ಸತೀಶ್ ಭಟ್ ದುರ್ಗಶ್ರೀಯವರು ಬಿಡುಗಡೆಗೊಳಿಸಿದರು.

ದೇವಸ್ಥಾನದ ಅಧ್ಯಕ್ಷ ಸುಂದರ ಅತ್ರಿಜಾಲು ಶುಭಹಾರೈಸಿದರು.ಶಾಸ್ತಾರ ಫ್ರೆಂಡ್ಸ್ ನ ಅಧ್ಯಕ್ಷ ಸತೀಶ್ ಗೌಡ ಹಲಸಿನಕಟ್ಟೆ. ಗೌರವಾಧ್ಯಕ್ಷ ಕುಶಾಲಪ್ಪ ಗೌಡ ಮರ್ವೋಡಿ,ಉಪಾಧ್ಯಕ್ಷ ತಿಮ್ಮಪ್ಪಗೌಡ ಬ್ಯಾತೋಡಿ, ಕಾರ್ಯದರ್ಶಿ ಉದಯಕುಮಾರ್ ಮಕ್ಕಿಗದ್ದೆ, ಕ್ರೀಡಾ ಕಾರ್ಯದರ್ಶಿ ಭರತ್.ಬಿ ಉಪಸ್ಥಿತರಿದ್ದರು.
ನೆಲ್ಯಾಡಿಯ ಗ್ರಾಮೀಣ ಭಾಗದಲ್ಲಿ ಕೆಸರುಗದ್ದೆಗಳು ಮರೆಯಾಗುತ್ತಿರುವ ಈ ದಿನಗಳಲ್ಲಿ ಮಕ್ಕಳು ಮತ್ತು ಯುವಕ-ಯುವತಿಯರು ದಿನವಿಡಿ ಮನರಂಜನೆ ಮತ್ತು ಕ್ರೀಡಾ ಸ್ಪೂರ್ತಿಯಿಂದ, ಕ್ರೀಡಾಭಿಮಾನಿಗಳು ಭಾಗವಹಿಸಿ ಕೂಟವನ್ನು ಯಶಸ್ವಿಗೊಳಿಸಬೇಕೆಂದು ಕ್ರೀಡಾಕೂಟದ ಸಂಯೋಜಕ,ನುರಿತ ಕ್ರೀಡಾ ನಿರೂಪಕ ಸುರೇಶ್ ಪಡಿಪಂಡ ಮಾಧ್ಯಮಕ್ಕೆ ಮಾಹಿತಿ ನೀಡಿದರು.

Leave a Reply

error: Content is protected !!