ನೇಸರ ಸೆ.02: ಕೌಕ್ರಾಡಿ ಗ್ರಾಮ ವ್ಯಾಪ್ತಿಯ ಕರ್ನಾಟಕ ಸರಕಾರದ ಇ -ಆಡಳಿತ ಇಲಾಖೆ ಯಡಿಯಲ್ಲಿ ಕಾರ್ಯಾಚರಿಸುತ್ತಿರುವ “ಗ್ರಾಮ ಒನ್ “ನಾಗರಿಕ ಸೇವಾ ಕೇಂದ್ರ, ಮ್ಯಾಟ್ರಿಕ್ ಗ್ರಾಮ ಒನ್ ಕೇಂದ್ರ ದಿನಾಂಕ 1/9/22ನೇ ಗುರುವಾರ ದುರ್ಗಾ ಶ್ರೀ ಟವರ್ಸ್ ನೆಲ್ಯಾಡಿಯಲ್ಲಿ ಶುಭಾರಂಭಗೊಂಡಿತು.
ಕಡಬ ತಹಸೀಲ್ದಾರ್ ಬಿ.ಅನಂತಕುಮಾರ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು ಕರ್ನಾಟಕ ಸರಕಾರದ ಇ-ಆಡಳಿತ ಇಲಾಖೆಯಡಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಸುಮಾರು 750ಕ್ಕೂ ಮಿಕ್ಕಿ ಸೇವೆಗಳನ್ನು ಒಂದೇ ಸೂರಿನಡಿ ನೀಡಲಿದೆ, ನಾಗರಿಕರು ತಮ್ಮ ಗ್ರಾಮದಲ್ಲಿಯೇ ಸರಕಾರದ ಸೇವೆಗಳನ್ನು ಮದ್ಯವರ್ತಿಗಳ ಹಾವಳಿ ಇಲ್ಲದೆ, ತಾಲೂಕು, ಹೋಬಳಿ ಮಟ್ಟದ ಕಚೇರಿಗಳ ಅಲೆದಾಟದ, ಸಂಚಾರ ವೆಚ್ಚವಿಲ್ಲದೆ ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಶ್ರೀಮತಿ ವನಿತಾ ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು, ದುರ್ಗಾ ಶ್ರೀ ಕಟ್ಟಡ ಮಾಲೀಕ ಸತೀಶ್ ಕೆ.ಎಸ್, ದೊಂತಿಲ ದೇವಸ್ಥಾನದ ಪ್ರಧಾನ ಅರ್ಚಕ, ಅನಂತ ಪದ್ಮನಾಭ ನೂಜಿನ್ನಾಯ, ಕೌಕ್ರಾಡಿ ಗ್ರಾಮಪಂಚಾಯತ್ ಸದಸ್ಯರಾದ ಉದಯ ಕುಮಾರ್ ಗೌಡ ದೊಂತಿಲ, ಮಹಮ್ಮದ್ ಹನೀಫ್, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರವಿ ಪ್ರಸಾದ್ ಶೆಟ್ಟಿ, ಪ್ರಕಾಶ್, ಗ್ರಾಮ ಕರಣಿಕೆ ಅಶ್ವಿನಿ, ಗ್ರಾಮ ಸಹಾಯಕ ಕಿರಣ್ ಮತ್ತು ನಾರಾಯಣ.ಯನ್. ಬಲ್ಯ, ವಾಸುದೇವ ಗೌಡ, ಪ್ರಶಾಂತ್ ಶೆಟ್ಟಿ, ಗ್ರಾಮ ಒನ್ ಕೇಂದ್ರದ ಮಾಲಕರು ಗುಣಶೀಲ ವಿಶ್ವನಾಥ್, ಮೊಬೈಲ್ ಮ್ಯಾಟ್ರಿಕ್ಸ್ ಮಾಲೀಕ ವಿಶ್ವನಾಥ ಗೌಡ ಮೊದಲಾದವರು ಉಪಸ್ಥಿತರಿದ್ದರು.