ಮಹಿಳೆ ಅಸಹಜ ಸಾವು: ಪತಿಯೇ ಕೊಲೆಗಡುಕ ಸಾಬೀತು

ಶೇರ್ ಮಾಡಿ

ನೇಸರ ಸೆ.3: ಆಗಸ್ಟ್ 30ರಂದು ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ಮಹಿಳೆಯೊಬ್ಬರ ಅಸಹಜ ಸಾವಿಗೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ಸೆಪ್ಟೆಂಬರ್ 3ರಂದು ಬಂಧಿಸಲಾಗಿದೆ.
ಪತಿ ಪತ್ನಿಯರ ನಡುವೆ ನಡೆದ ಕಲಹದಲ್ಲಿ ಪತಿಯು ಪತ್ನಿಗೆ ಹಲ್ಲೆ ಮಾಡಿದ ಸಂದರ್ಭ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಮಹಜರಿನಲ್ಲಿ ದೃಢವಾಗಿದೆ.
ಏನಿದು ಪ್ರಕರಣ:
ಮೂಲತಃ ಶನಿವಾರ ಸಂತೆಯವರಾದ ಗಣೇಶ್ (43)ಹಾಗೂ ಮೋಹಿನಿ(35) ಕಳೆದ 8 ವರ್ಷಗಳಿಂದ ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ವಾಸವಾಗಿದ್ದು, ವೃತ್ತಿಯಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದರು.
ವಿಪರೀತ ಕುಡಿತದ ಚಟ ಹೊಂದಿದ್ದ ಇಬ್ಬರೂ ಕೂಡ ಆಗಾಗ ಜಗಳವಾಡುತ್ತಿದ್ದರು. ಆಗಸ್ಟ್ 30ರಂದು ಗಲಭೆ ತಾರಕಕ್ಕೇರಿ ಗಣೇಶ್ ಮೋಹಿನಿಯವರ ತಲೆಗೆ ಹೊಡೆದಿದ್ದಾರೆ. ಹೊಡೆತದ ರಬ್ಬಸಕ್ಕೆ ಮೋಹಿನಿ ಸಾವನ್ನಪ್ಪಿದ್ದಾರೆ.
ಸಪ್ಟೆಂಬರ್ 3ರಂದು ಸ್ಥಳ ಮಹಜರು ನಡೆಸಿದ ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.‌

Leave a Reply

error: Content is protected !!