ತ್ಯಾಗದಿಂದ ಕರ್ಮ‌ ಮಾಡಿದಾಗ ಮೋಕ್ಷ ಪ್ರಾಪ್ತಿ:ಬ್ರಹ್ಮಾನಂದ ಶ್ರೀ

ಶೇರ್ ಮಾಡಿ

ನೇಸರ ಸೆ.04: ಕರ್ಮಯೋಗ ಮಾಡುವಾಗ ಯಾರಿಗೂ ಹಿಂಸೆಯಾಗದಂತೆ ಅಂತರ್ಶುದ್ದಿಯಿಂದ ಮಾಡಬೇಕು. ಯಾರಿಗೂ ಹಿಂಸೆ ನೋವು ಕೊಡದೆ ಬದುಕಬೇಕು. ತ್ಯಾಗದಿಂದ ಕರ್ಮ ಮಾಡಿದಾಗ ಮೋಕ್ಷ ಪ್ರಾಪ್ತಿಯಾಗಲಿದೆ. ಗೌರವವನ್ನು ಹೆಚ್ಚಿಸುವ ಕೆಲಸ ಮಾಡುತ್ತಾ ಅಹಿಂಸೆ, ಸತ್ಕರ್ಮಗಳ ಮೂಲಕ ನಡೆದರೆ ಲೋಕ ಕಲ್ಯಾಣ ಆಗುವುದು ಎಂದು ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.

ಸೆ.3ರಂದು ಶ್ರೀಗುರುದೇವ ಮಠದಲ್ಲಿ ಜರಗಿದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಂ ನಿತ್ಯಾನಂದ ನಗರ ಧರ್ಮಸ್ಥಳ ಇಲ್ಲಿನ‌ ಶ್ರೀ ಜಗದ್ಗುರು ಮಹಾಸಂಸ್ಥಾನದ ಪೀಠದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 14 ನೇ ಪಟ್ಟಾಭಿಷೇಕ ವರ್ಧ್ಯಂತ್ಯುತ್ಸವ ಕಾರ್ಯಕ್ರಮ ಅವರು ಆಶೀರ್ವಚನ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಜಾತಿ, ಧರ್ಮ, ರಾಜಕೀಯ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಪೋಷಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕಿಯೋನಿಕ್ಸ್ ನಿಕಟಪೂರ್ವ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಭಾರತ ಕೃಷಿ ಮತ್ತು ಋಷಿ ಸಂಸ್ಕೃತಿಗಾಗಿ ಪ್ರಸಿದ್ದಿ ಪಡೆದಿದೆ. ಪರಮಾತ್ಮ ಮತ್ತು ಜೀವಾತ್ಮದ‌ ನಡುವಿನ ಸೇತುವೆಯಂತಿರುವವರು ಗುರುಗಳು. ಧರ್ಮದ ಕೇಂದ್ರಗಳು ಮನುಕುಲಕ್ಕೆ ಬೆಳಕಾಗಬೇಕು ಎಂದರು.

ಸಮಾರಂಭಕ್ಕೆ ಸಂಸದ ಹಾಗೂ ರಾಜ್ಯ‌ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ವಿಧಾನ ಪರಿಷತ್ ಶಾಸಕ‌ ಹಾಗೂ‌ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹರೀಶ್ ಕುಮಾರ್, ಮಂಗಳೂರು ಗರೋಡಿಯ ಚಿತ್ತರಂಜನ್,ಬಿಜೆಪಿ ಮಂಡಲದ‌ ಅಧ್ಯಕ್ಷ ಜಯಂತ ಕೋಟ್ಯಾನ್, ಭುಜಬಲಿ ಧರ್ಮಸ್ಥಳ, ಪಿ.ಕೆ ರಾಜು ಪೂಜಾರಿ ಕಾಶಿಪಟ್ಣ,ಅಣ್ಣಿ ಪೂಜಾರಿ,ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ರವೀಂದ್ರ ಆರ್ಲ, ಸೀತಾರಾಮ ಬಿ.ಎಸ್, ಕಾರ್ಪೋರೇಟರ್ ಕಿರಣ್‌ ಕುಮಾರ್, ಅಶೋಕ ಕುಮಾರ್ ಚಿಕ್ಕಮಗಳೂರು, ಭಾಸ್ಕರ ಧರ್ಮಸ್ಥಳ, ಆರ್.ಜಿ ನಾಯ್ಕ್ ಕುಮುಟ, ಶೇಖರ ಬಂಗೇರ ಮುಂಬೈ, ಕೃಷ್ಣಪ್ಪ ಗುಡಿಗಾರ, ಕೃಷ್ಣಪ್ಪ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

ಟ್ರಸ್ಟಿ ತುಕರಾಮ‌ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಹಿರಿಯ ಪತ್ರಕರ್ತ ಆರ್.ಎನ್. ಪೂವಣಿ ಅವರನ್ನು ಸ್ವಾಮೀಜಿ ಗೌರವಿಸಿದರು.

See also  ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಮಣ್ಯ ಇದರ ವಾಣಿಜ್ಯ ಹಾಗೂ ಉದ್ಯಮಾಡಳಿತ ವತಿಯಿಂದ ನಾಟಿ ಕಾರ್ಯಕ್ರಮ

Leave a Reply

Your email address will not be published. Required fields are marked *

error: Content is protected !!