ನೆಲ್ಯಾಡಿ: ಜೇಸಿ ಸಪ್ತಾಹ ನಮಸ್ತೆ-2022 ; ಆಮಂತ್ರಣ ಪತ್ರಿಕೆ ಬಿಡುಗಡೆ

ಶೇರ್ ಮಾಡಿ

ನೇಸರ ಸೆ.08: ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇವರ ಸಹಯೋಗದೊಂದಿಗೆ ಜೇಸಿ ಸಪ್ತಾಹ “ನಮಸ್ತೆ-2022” ಸೆ.9 ರಿಂದ 15ರ ತನಕ ನಡೆಯಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸೆ.8ರಂದು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ, ಗೋಳಿತ್ತಟ್ಟು ನಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜೇಸಿಐ ಅಧ್ಯಕ್ಷೆ ಜೇಸಿ.ಜಯಂತಿ ಬಿ.ಎಂ., ನಿಕಟಪೂರ್ವ ಅಧ್ಯಕ್ಷರಾದ ಜೇಸಿ.ಗಿರೀಶ್ ಡಿ., ಜೇಸಿ.ಜಯಾನಂದ ಬಂಟ್ರಿಯಾಲ್, ಯೋಜನಾ ನಿರ್ದೇಶಕರಾದ ಜೇಸಿ.ಶಿವಪ್ರಸಾದ್, ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಏಳು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳ ನ್ನು ಜೇಸಿ.ಜಯಾನಂದ ಬಂಟ್ರಿಯಾಲ್ ತಿಳಿಸಿದರು.
ಸೆ.9ರಂದು ಬೆಳಿಗ್ಗೆ ಗೋಳಿತ್ತಟ್ಟು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಜೇಸಿ ಸಪ್ತಾಹ ಉದ್ಘಾಟನಾ ಸಮಾರಂಭ ನಡೆಯಲಿದ್ದು ಅಂತರ್ ರಾಷ್ಟ್ರೀಯ ಕ್ರೀಡಾಪಟು ಯೇಸುದಾಸ್‌ರವರು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ವಿವಿಧ ಶಾಲಾ ಮಕ್ಕಳ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ವಿಜೇತರಿಗೆ ಜೇಸಿಐ ಟ್ರೋಫಿ ವಿತರಣೆ, ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ನಡೆಯಲಿದೆ. ಸೆ.10ರಂದು ಸಂಜೆ ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಜೇಸಿ ಕುಟುಂಬ ದಿನ ಕಾರ್ಯಕ್ರಮ ನಡೆಯಲಿದ್ದು ಜೇಸಿ.ವಿಶ್ವನಾಥ ಶೆಟ್ಟಿ ಪ್ರಾಯೋಜಕತ್ವದಲ್ಲಿ ಲಹರಿ ಸಂಗೀತ ಕಲಾ ಕೇಂದ್ರ ಐಐಸಿಟಿ ನೆಲ್ಯಾಡಿ ಇವರಿಂದ ಗಾನಾಮೃತ ಹಾಗೂ ಜೇಸಿ ಕುಟುಂಬ ಸದಸ್ಯರಿಗೆ ವಿವಿಧ ಒಳಾಂಗಣ ಸ್ಪರ್ಧೆ, ನಿವೃತ್ತ ಜೇಸಿ ಶಿಕ್ಷಕರಿಗೆ ಗೌರವಾರ್ಪಣೆ ನಡೆಯಲಿದೆ. ಸೆ.11ರಂದು ಬೆಳಿಗ್ಗೆ ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಸಾರ್ವಜನಿಕ ಕ್ರೀಡೋತ್ಸವ ನಡೆಯಲಿದೆ. ಸೆ.12ರಂದು ಮಧ್ಯಾಹ್ನ ನೆಲ್ಯಾಡಿ ಕರಂದಳದಲ್ಲಿರುವ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಪರಿಸರ ಸಂರಕ್ಷಣೆ ಗಿಡ ನೆಡುವುದು ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಕ್ರಮ, ಘನತ್ಯಾಜ್ಯ ನಿರ್ವಹಣೆ ಮಹಿಳಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಸೆ.13ರಂದು ಸಂಜೆ ನೆಲ್ಯಾಡಿ ಕೊಲ್ಯೊಟ್ಟು ಸೈಂಟ್ ಜೋಸೆಫ್ ಪ್ರಶಾಂತ ನಿವಾಸದಲ್ಲಿ ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಡಿ ಪ್ರಶಾಂತ ನಿವಾಸಕ್ಕೆ ಹಣ್ಣುಹಂಪಲು ವಿತರಣೆ, ನೆಲ್ಯಾಡಿ ಹಾಗೂ ಕೊಣಾಲು ಶಾಲೆಗೆ ದತ್ತಿನಿಧಿ ವಿತರಣೆ ನಡೆಯಲಿದೆ. ಸೆ.14ರಂದು ಬೆಳಿಗ್ಗೆ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಮಧುಮೇಹ ರೋಗ ಪರೀಕ್ಷೆ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಸೆ.15ರಂದು ಜೇಸಿ ಸಪ್ತಾಹದ ಸಮಾರೋಪ ನಡೆಯಲಿದ್ದು ಸಮಾರಂಭದಲ್ಲಿ ಪರಿಸರ ಪ್ರೇಮಿ ದುರ್ಗಾಸಿಂಗ್, ಪ್ರಗತಿಪರ ಕೃಷಿಕ ಹೊಸಮನೆ ತುಕಾರಾಮ ರೈ, ಅಡಿಕೆ ವ್ಯಾಪಾರಸ್ಥ ಮಹಮ್ಮದ್ ನಝೀರ್‌ರವರಿಗೆ ಗೌರವಾರ್ಪಣೆ ನಡೆಯಲಿದೆ. ವಲಯ ತರಬೇತುದಾರರಾದ ಜೇಸಿ.ಮೇರಿ ಜೋನ್‌ರವರಿಗೆ ಕಮಲಪತ್ರ ಪುರಸ್ಕಾರ ನಡೆಯಲಿದೆ.

Leave a Reply

error: Content is protected !!