ಕುಕ್ಕೆಗೆ ಜೆಡಿಎಸ್ ನ ಚೈತ್ರಾ ಗೌಡ ಭೇಟಿ; ಮಹಿಳೆಯರನ್ನು ಒಗ್ಗೂಡಿಸಲು ಪ್ರಯತ್ನ

ಶೇರ್ ಮಾಡಿ

ನೇಸರ ಸೆ.13: ದಕ್ಷಿಣ ಭಾರತದ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಮತ್ತೆ ಬಲಪಡಿಸುವ ಹಿನ್ನಲೆಯಲ್ಲಿ ಮಹಿಳೆಯರನ್ನು ಪ್ರಥಮವಾಗಿ ಒಗ್ಗೂಡಿಸಿಕೊಂಡು ಅವರಿಗೆ ಸ್ವ ಉದ್ಯೋಗ ನೀಡಿ, ಬಳಿಕ ಅವರನ್ನು ಪಕ್ಷ ಸಂಘಟನೆಯಲ್ಲಿ ದುಡಿಯಲು ಪೂರಕ ವಾತಾವರಣ ಕಲ್ಪಿಸುದು ಹಾಗೂ ಇದನ್ನು ಗ್ರಾಮ ಮಟ್ಟದಿಂದ ಜಾರಿಗೆ ತರವ ಬಗ್ಗೆ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಜೆಡಿಎಸ್ ಪಕ್ಷದ ಮಹಿಳಾ ಯುವ ರೈತ ದಳದ ರಾಜ್ಯಾಧ್ಯಕ್ಷೆ ಚೈತ್ರಾ ಗೌಡ ಹೇಳಿದರು.
ಅವರು ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರು ಉತ್ತಮ ರೀತಿಯಲ್ಲಿ ದುಡಿಯುತ್ತಿದ್ದರು ಅದನ್ನು ಇನ್ನೂ ಬಲಪಡಿಸಿ ಪಕ್ಷವನ್ನು ಗ್ರಾಮ ಮಟ್ಟದಿಂದ ಬಲಪಡಿಸಲಾಗುವುದು, ಮೊದಲ ಹಂತದಲ್ಲಿ ನಾವು ನಮ್ಮ ಕೈಲಾದ ಸಹಾಯ ನೀಡುತ್ತೇವೆ ಎಂದರು.
ಮುಂದಿನ ಚುನಾವಣೆಗೆ ಈಗಾಗಲೇ ಪಕ್ಷದ ವತಿಯಿಂದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ರಾಜ್ಯದ ಕಾಂಗ್ರೆಸ್, ಬಿಜೆಪಿ ಪಕ್ಷದ ಬಗ್ಗೆ ಜನರು ಬೇಸತ್ತಿದ್ದಾರೆ. ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಇಲ್ಲಿನ ಜನ ಬಿಜೆಪಿ ವಿರುದ್ಧ ಅಸಮಾಧಾನ ತೋಡಿದ್ದಾರೆ. ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ನಿರೀಕ್ಷೆಯ ಸೀಟುಗಳನ್ನು ಗೆಲ್ಲಲಿದೆ ಎಂಬ ನಿರೀಕ್ಷೆ ಇದೆ ಎಂದರು.

ಈಸ್ರೆಲ್ ಮಾದರಿ;
ಜೆಡಿಎಸ್ ರೈತ ಘಟಕದಿಂದ ಈಸ್ರೆಲ್ ಮಾದರಿಯ ರೈತಾಪಿ ಬಗ್ಗೆ ಯೋಜನೆ ರೂಪಿಸುವ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಂಡ್ಯ, ಮೈಸೂರು ಭಾಗದಲ್ಲಿ ಮಾಡುತ್ತಿದ್ದೇವೆ, ಮುಂದೆ ಅದನ್ನು ಹೆಚ್ಚಿನ ಜಿಲ್ಲೆಗೆ ಹಾಗೂ ಈ ಭಾಗಕ್ಕೂ ವಿಸ್ತರಿಸಲು ಉದ್ದೇಶ ಇಟ್ಟಕೊಂಡಿದ್ದೇವೆ, ಪಕ್ಷದ ವತಿಯಿಂದ ರೈತರಿಗೆ ಯಾವ ರೀತಿಯಲ್ಲಿ ಸಹಕಾರ ನೀಡಬಹುದೋ ಅದನ್ನು ನೀಡಲಾಗುವುದು ಎಂದರು. ರೈತ ಮಹಿಳೆಯರ ಸಮಸ್ಯೆಗಳನ್ನು ಹಳ್ಳಿ, ಹಳ್ಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಪರಿಹರಿಸುವ ಮೂಲಕ ಸಂಘಟನೆ ಮಾಡಲಾಗುವುದು.
ಸರಕಾರ ವಿಫಲ:
ರಾಜ್ಯ ಸರಕಾರ ಆಡಳಿದಲ್ಲಿ ವಿಫಲವಾಗಿದೆ ಎಂದು ದೂರಿದ ಚೈತ್ರಾ ಗೌಡ ಈಗಿನ ಪರ್ಸಂಟೇಜ್ ಸರಕಾರ ಬೆಂಗಳೂರು ನಗರದಲ್ಲಿ ಉತ್ತಮ ರೀತಿ ಡ್ರೈನೇಜ್ ಮಾಡಲು ಆಗದೆ ಇತ್ತೀಚಿನ ಮಳೆಗೆ ನಗರ ಜಲಾವೃತಗೊಳ್ಳಬೇಕಾಯಿತು. ಇದು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದ ಸಂದರ್ಭದಲ್ಲಿ ಶಿರಾಡಿ ಘಾಟ್ ಕುಸಿತಕ್ಕೆ ಶಾಶ್ವತ ಪರಿಹಾರಕ್ಕೆ ಮುಂದಾದ ವೇಳೆ ಕೆಲವರು ಅಡ್ಡಗಾಲು ಹಾಕಿ, ಕಾಮಗಾರಿ ನಡೆಯದಂತೆ ನೋಡಿದ್ದರು, ಅದರ ಬಳಿಕ ಸರಕಾರ ಬದಲಾದ ಪರಿಣಾಮ ಅಲ್ಲಿ ಇನ್ನೂ ಶಾಶ್ವತ ಪರಿಹಾರ ಆಗಿಲ್ಲ. ಮುಂದೆ ಸರಕಾತ ಬಂದಾಗ ಶಾಶ್ವತ ಕಾಮಗಾರಿ ನಡೆಸಲಾಗುತ್ತದೆ. ಅಲ್ಲಿನ ಸಂಸದರು ಒತ್ತಡ ಹಾಕಿ ಕೆಲಸ ಮಾಡಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ನಡೆಸುತ್ತಿದ್ದಾರೆ.
ರಾಜಕೀಯ ಪಕ್ಷಗಳು ವೈಯಕ್ತಿಕ ವಿಚಾರಗಳನ್ನು ಪಬ್ಲಿಕ್ ಎಂಬಂತೆ ಬಿಂಬಿಸಿ ಅಮಾಯಕ ರನ್ನು ಬಲಿ ತೆಗೆಯುವ ಕೆಲಸವನ್ನು ಮಾಡುತ್ತಿದೆ. ಇದರಿಂದ ಅಮಾಯಕರು ಎಷ್ಟೋ ಯುವಕರು ಇಂದಿಗೂ ಅವರಿಗೆ ಸಂಬಂಧಪಡದ ವಿಚಾರಕ್ಕೆ ನ್ಯಾಯಾಲಯದ ಕಡೆ ಅಲೆಯುತ್ತಿದ್ದಾರೆ ಇದು ಕೊನೆ ಕಾಣಬೇಕಿದೆ ಎಂದರು.

See also  ಸರ್ಕಾರಿ ನೌಕರರ ಮುಷ್ಕರ ಕೈಬಿಡಲು ನಿರ್ಧಾರ: ಸಿ.ಎಸ್ ಷಡಕ್ಷರಿ

ಕುಕ್ಕೆಗೆ ಭೇಟಿ:
ಚೈತ್ರಾ ಗೌಡ ಅವರು ಕುಟುಂಬದವರೊಂದಿಗೆ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರುಶನ ಪಡೆದು, ಸೇವೆ ನೆರವೇರಿಸಿ, ಪ್ರಸಾದ ಸ್ವೀಕರಿಸಿದರು. ಸುಬ್ರಹ್ಮಣ್ಯ ಜೆಡಿಎಸ್ ಪ್ರಮುಖರು ಚೈತ್ರಾ ಗೌಡ ಅವರನ್ನು ಹೂ ನೀಡಿ ಸ್ವಾಗತಿಸಿದರು. ಜೆಡಿಎಸ್ ಮಹಿಳಾ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷೆ ಜ್ಯೋತಿ ಪ್ರೇಮಾನಂದ, ಕಡಬ ತಾಲೂಕು ಉಪಾಧ್ಯಕ್ಷ ಸೋಮಸುಂದರ ಕೂಜುಗೋಡು, ಪ್ರಧಾನ ಕಾರ್ಯದರ್ಶಿ ತಿಲಕ್ ಎ.ಎ., ಎಸ್.ಸಿ.ಎಸ್.ಟಿ. ಘಟಕದ ಕಡಬ ತಾಲೂಕು ಅಧ್ಯಕ್ಷ ದುಗ್ಗಪ್ಪ ಅಗ್ರಹಾರ, ಸುಬ್ರಹ್ಮಣ್ಯ ಗ್ರಾಮ ಸಮಿತಿ ಕಾರ್ಯದರ್ಶಿ ದಿನೇಶ್ ಎಂ.ಪಿ., ಗ್ರಾ.ಪಂ. ಸದಸ್ಯ ನಾರಾಯಣ ಅಗ್ರಹಾರ, ಯುವ ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಮುಂಡೋಡಿ, ಪ್ರಮುಖರಾದ ನಾರಾಯಣ ಮಾನಾಡು, ಕೇಶವ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!