
ನೇಸರ ಸೆ.15: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ ಗ್ರಾಮ ಪಂಚಾಯತ್ ಕೊಕ್ಕಡ ಇದರ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಕೊಕ್ಕಡ ಅಂಬೇಡ್ಕರ್ ಭವನದಲ್ಲಿ ಸೆಪ್ಟೆಂಬರ್ 14ರಂದು ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯೋಗೀಶ್ ಅಲಂಬಿಲ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ವಲಯ ಮೇಲ್ವಿಚಾರಕಿ ಶ್ರೀಮತಿ ವಿನೋದ ಪ್ರಸ್ತಾವಿಕವಾಗಿ ಮಾತನಾಡಿ ಪೋಷಣ್ ಮಸಾಚರಣೆಯ ಬಗ್ಗೆ ವಿವರಣೆ ನೀಡಿದರು. ಅರೋಗ್ಯ ಸುರಕ್ಷತಾ ಅಧಿಕಾರಿ ಶ್ರೀಮತಿ ಆಶಾಲತಾ ಮತ್ತು ಆರ್ಥಿಕ ಸಾಕ್ಷರತಾ ಸಮಾಲೋಚಕರಾದ ಶ್ರೀಮತಿ ಉಷಾ ಕಾಮತ್ ಇವರು ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಪವಿತ್ರ, ಪಂಚಾಯತ್ ಸದಸ್ಯರಾದ ಶ್ರೀಮತಿ ಬೇಬಿ, ವಿಶ್ವನಾಥ್ ಕಕ್ಕುದೊಳಿ, ಸ್ತ್ರೀ ಶಕ್ತಿ ಗೊಂಚಲಿನ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮ ಪಂಚಾಯತ್ ಕಾರ್ಯದರ್ಶಿ, ಸಂಜೀವಿನಿ ಒಕ್ಕೂಟದ MBK, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಶ್ರೀಮತಿ ಹರಿಣಾಕ್ಷೀ ಮತ್ತು ಕಮಲ ಸ್ವಾಗತಿಸಿ ನಿರೂಪಿಸಿದರು, ಸರಿತಾ ಧನ್ಯವಾದ ನೀಡಿದರು.




