ನೆಲ್ಯಾಡಿ: ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮ

ಶೇರ್ ಮಾಡಿ

ನೇಸರ ಸೆ.16: ಶ್ರೀ ರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ ಸೆ.10 ಶನಿವಾರದಂದು ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಅತಿಥಿಗಳಾಗಿ ಆಗಮಿಸಿದ ಜನಜಾಗ್ರತಿ ವೇದಿಕೆ ನೆಲ್ಯಾಡಿ ವಲಯದ ಅಧ್ಯಕ್ಷರು ಶ್ರೀಯುತ ಜಯನಂದ ಬಂಟ್ರಿಯಾಲ್ ಮತ್ತು ಸುಚಿತ್ರ ಬಂಟ್ರಿಯಾಲ್ ದಂಪತಿಗಳು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿ ನೀಡಿ, ತಿಲಕ ಇಟ್ಟು ಆಶೀರ್ವದಿಸಿದರು.
ಹಾಗೆಯೇ ಸಂಸ್ಕಾರ ಕೊಡುವುದನ್ನು ಈ ವಿದ್ಯಾಲಯವು ವಿದ್ಯಾರ್ಥಿಗಳಿಗೆ ಕಲ್ಪಿಸಿದೆ‌ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕರಾದ ಶ್ರೀಯುತ ಗಣೇಶ್ ವಾಗ್ಲೆ ಉಪಸ್ಥಿತರಿದ್ದರು. ಶ್ರೀಮತಿ ಅಶ್ವಿನಿ ಮಾತಾಜಿ ಸ್ವಾಗತಿಸಿ, ಕುಮಾರಿ ತ್ರಿವೇಣಿ ಮಾತಾಜಿ ಧನ್ಯವಾದವಿತ್ತರು. ಕುಮಾರಿ ದಿವ್ಯ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!