ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘ; ಅಧ್ಯಕ್ಷೆಯಾಗಿ ಉಷಾ ಅಂಚನ್, ಉಪಾಧ್ಯಕ್ಷೆಯಾಗಿ ಮೇಘನಾಶೈನ್ ಆಯ್ಕೆ

ಶೇರ್ ಮಾಡಿ

ನೇಸರ ಸೆ.20: ನೆಲ್ಯಾಡಿ ಕಡಬ ತಾಲೂಕಿನಲ್ಲಿ ಆರಂಭವಾಗಿರುವ ಪ್ರಥಮ ಮಹಿಳಾ ಸಹಕಾರ ಸಂಘ ಆಗಿರುವ ಕಾಮಧೇನು ಮಹಿಳಾ ಸಹಕಾರ ಸಂಘ ನೆಲ್ಯಾಡಿ ಇದರ ನೂತನ ಅಧ್ಯಕ್ಷೆಯಾಗಿ ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ಹಾಗೂ ಉಪಾಧ್ಯಕ್ಷೆಯಾಗಿ ನೆಲ್ಯಾಡಿಯ ಮೇಘನಾಶೈನ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೆಲ್ಯಾಡಿಯ ಸಂಘದ ಕಚೇರಿಯಲ್ಲಿ ಸೆ.20ರಂದು ನಡೆದ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಪುತ್ತೂರು ಉಪವಿಭಾಗದ ಮಾರಾಟಾಧಿಕಾರಿಯಾಗಿರುವ ಶೋಭಾ ಎನ್.ಎಸ್. ರವರು ಚುನಾವಣಾಧಿಕಾರಿಯಾಗಿದ್ದರು. ಸಂಘದ ಎಲ್ಲಾ ನಿರ್ದೇಶಕರು, ಸಂಘದ ಸಲಹಾ ಸಮಿತಿ ಸದಸ್ಯರಾದ ಜನಾರ್ದನ ಬಾಣಜಾಲು, ಕಲಾವತಿ ರೈ ತೋಟ, ಲಲಿತಾ ನೆಲ್ಯಾಡಿ, ಬಾಬು ಪೂಜಾರಿ ಕಿನ್ಯಡ್ಕ ಸಭೆಯಲ್ಲಿ ಉಪಸ್ಥಿತರಿದ್ದರು.

ನೂತನವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಉಷಾ ಅಂಚನ್ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡ ಮೇಘನಾಶೈನ್‌ ರವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಉಷಾ ಅಂಚನ್‌ರವರು ಮಾತನಾಡಿ, ನಾವೆಲ್ಲ ಒಂದಾಗಿ ಸಂಘದ ಅಭಿವೃದ್ಧಿಗೆ ಕೆಲಸ ಮಾಡುವ, ಎಲ್ಲರ ಸಹಕಾರ ಕೋರಿದರು.
ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀಮತಿ ಉಷಾ ಅಂಚನ್‌ರವರು ತಾ.ಪಂ.ನ ಮಾಜಿ ಸದಸ್ಯೆಯಾಗಿ. ಕೊಣಾಲು – ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿ, ಜಿಲ್ಲಾ ಮೂರ್ತೆದಾರರ ಮಹಾಮಂಡಲದ ನಿರ್ದೇಶಕರಾಗಿ, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿ, ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ಪುತ್ತೂರು ಇದರ ನಿರ್ದೇಶಕರಾಗಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ, ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರ ಸಂಘ ಪುತ್ತೂರು ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿರುವ ಮೇಘನಾಶೈನ್‌ರವರು ನೆಲ್ಯಾಡಿ ಸಮೀಪದ ನಿವಾಸಿಯಾಗಿದ್ದು, ಇವರು ಅನೇಕ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

12 ಸದಸ್ಯ ಬಲವಿರುವ ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ನಡೆದಿತ್ತು. ನಿರ್ದೇಶಕರುಗಳಾಗಿ ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಶಿರಾಡಿ ಗ್ರಾ.ಪಂ.ಅಧ್ಯಕ್ಷೆ ವಿನೀತಾ ತಂಗಚ್ಚನ್, ನೆಲ್ಯಾಡಿ ಗ್ರಾ.ಪಂ.ಸದಸ್ಯೆ ಶ್ರೀಲತಾ ಸಿ.ಹೆಚ್.ಮಾದೇರಿ, ಕೊಣಾಜೆ ಗ್ರಾ.ಪಂ.ಸದಸ್ಯೆ ಮೈತ್ರಿ ಪುತ್ತಿಗೆ, ಮೇಘನಾಶೈನ್ ನೆಲ್ಯಾಡಿ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷೆ ಶಾಲಿನಿಶೇಖರ ಪೂಜಾರಿ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಕಚೇರಿ ಸಿಬ್ಬಂದಿ ಜಯಂತಿ ಬಿ.ನಾಯ್ಕ್ ಆಲಂತಾಯ, ಪ್ರವೀಣಿಸುಧಾಕರ ಗೌರಿಜಾಲು, ರತಿ ಡಿ.ಶಾಂತಿನಗರ, ಕೊಲ್ಯೊಟ್ಟು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸಂಪಾವತಿ ಪಟ್ಟೆಜಾಲು, ಕೌಕ್ರಾಡಿ ಗ್ರಾ.ಪಂ.ಸದಸ್ಯೆ ಡೈಸಿವರ್ಗೀಸ್ ಇಚ್ಲಂಪಾಡಿ, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯೆ ವಾರಿಜಾಕ್ಷಿ ಕೊಣಾಲು, ಅವಿರೋಧವಾಗಿ ಆಯ್ಕೆಗೊಂಡಿದ್ದರು.
ಸಂಘದ ಸಿಬ್ಬಂದಿಗಳಾದ ಶ್ರೀಮತಿ ಚೈತನ್ಯ ಹೆಚ್., ಶ್ರೀಮತಿ ಸ್ವಾತಿ ವಿನಯ್ ಸಹಕರಿಸಿದರು.

Leave a Reply

error: Content is protected !!