ಸುಬ್ರಹ್ಮಣ್ಯ – ಉಡುಪಿ ರಾಜ್ಯ ಹೆದ್ದಾರಿ 37ಕ್ಕೆ ತಾತ್ಕಾಲಿಕ ದುರಸ್ತಿ ಕಾರ್ಯ

ಶೇರ್ ಮಾಡಿ

ನೇಸರ ಸೆ.22: ಸುಬ್ರಮಣ್ಯ ಉಡುಪಿ ರಾಜ್ಯ ಹೆದ್ದಾರಿ 37ರ ಪೆರಿಯಶಾಂತಿಯಿಂದ ಉಜಿರೆ ವರೆಗಿನ 30 ಕಿಲೋಮೀಟರ್ ವ್ಯಾಪ್ತಿ ರಸ್ತೆಗೆ ಮರಳು ಮಿಶ್ರಿತ ಜಲ್ಲಿಯನ್ನು ಲೋಕೋಪಯೋಗಿ ಇಲಾಖೆಯಿಂದ ಸೆ.21ರಂದು ಹಾಕಲಾಯಿತು.

ಹೂವಿನಕೊಪ್ಪಲ- ಕೊಕ್ಕಡ ಯುವಕರಿಂದ ರಸ್ತೆ ದುರಸ್ತಿ:
ಜೊತೆ ಜೊತೆಗೆ ಪ್ರಯಾಣಿಕರ ದುಸ್ತರವಾದ ಪ್ರಯಾಣವನ್ನು ದಿನಾಲು ಕಂಡು ಬೇಸತ್ತ ಕೊಕ್ಕಡದ ಸ್ಥಳೀಯ ಯುವಕರಾದ ಮಹೇಶ್ ಹೂವಿನಕೊಪ್ಪಲ- ಕೊಕ್ಕಡ, ಚಂದ್ರಶೇಖರ ಶಿಶಿಲ, ಜಗದೀಶ್, ಧನುಶ್ ಎಂಬುವವರು ಈ ರಸ್ತೆಯ ಹೂವಿನಕೊಪ್ಪಲ ಎಂಬಲ್ಲಿ ಜೆಸಿಬಿ ಮೂಲಕ ಮಣ್ಣನ್ನು ಹಾಕಿ ಸಮರ್ಪಕವಾದ ರಸ್ತೆಯಾಗುವಂತೆ ಸಹಕರಿಸಿದರು.

ಇತ್ತೀಚೆಗೆ ಸುರಿದ ವಿಪರೀತ ಮಳೆಯಿಂದಾಗಿ ರಸ್ತೆ ಇಕ್ಕಲಗಳಲ್ಲಿ ಮಳೆಯ ನೀರು ಹರಿದು ಹೋಗುವ ಚರಂಡಿಗಳು ಸಮರ್ಪಕವಾಗಿ ಇಲ್ಲದೆ, ರಸ್ತೆಗಳಲ್ಲಿ ನೀರು ಸಂಚರಿಸಿ ಈ ರಸ್ತೆಯ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ಉಂಟಾಗಿದ್ದು, ಧರ್ಮಸ್ಥಳ ಸುಬ್ರಮಣ್ಯ ಯಾತ್ರಾರ್ಥಿಗಳಿಗೆ ಹಾಗೂ ದಿನನಿತ್ಯದ ಪ್ರಯಾಣಿಕರಿಗೆ ತೀರಾ ಅನಾನುಕೂಲವಾಗಿತ್ತು.
ತಾತ್ಕಾಲಿಕ ವ್ಯವಸ್ಥೆಯಿಂದ ಪ್ರಯಾಣಿಕರಿಗೆ ತಕ್ಕಮಟ್ಟಿನ ಸಮಾಧಾನ ತಂದಿದೆ. ಆದರೆ ಶಾಶ್ವತ ಪರಿಹಾರಕ್ಕಾಗಿ ಸರಕಾರ ಹಾಗೂ ಇಲಾಖೆಗಳು ಕಾರ್ಯಪ್ರವೃತ್ತರಾಗಬೇಕಿದೆ.

Leave a Reply

error: Content is protected !!