ನೇಸರ ಸೆ.22: ಕೊಣಾಲು- ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ನಿಯಮಿತ 2021 22ನೇ ಸಾಲಿನಲ್ಲಿ ರೂ.5,14,895.19 ವ್ಯವಹಾರ ನಡೆಸಿ. ರೂ.2,88,112.12 ನಿವ್ವಳ ಲಾಭಗಳಿಸಿದೆ. ಲಾಭಾಂಶದಲ್ಲಿ ಶೇ.10% ಡಿವಿಡೆಂಟ್ ಹಾಗೂ ಶೇ.40% ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ ಅಂಚನ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಸೆ.21 ಕೊಣಾಲು – ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಕೊಣಾಲು ಇದರ ವಠಾರದಲ್ಲಿ ನಡೆಯಿತು.
ರಾಸುಗಳಿಗೆ ವಿಮೆಯ ಮಹತ್ವ- ಶ್ರೀಮತಿ ಶೃತಿ :
ದ.ಕ.ಹಾ.ಒಕ್ಕೂಟ ನಿ ಉಪ ವ್ಯವಸ್ಥಾಪಕರಾದ ಶ್ರೀಮತಿ ಶ್ರುತಿ ಮಾತನಾಡಿ ಸಂಘದ ಮೂಲಕ ಹಸುಗಳಿಗೆ ವಿಮೆ ಸೌಲಭ್ಯವಿದ್ದು ಪ್ರತಿಯೊಬ್ಬರು ರಾಸುಗಳಿಗೆ ವಿಮೆ ಮಾಡಿಸುವಂತೆ ಕರೆ ನೀಡಿದರು. ಸಂಘದ ಸದಸ್ಯರುಗಳಿಗೆ ರಾಸು ಖರೀದಿಗೆ ಸಹಾಯಧನ ನೀಡಲಾಗುತ್ತದೆ. ಹಾಲು ಪೂರೈಕೆ ಮಾಡುವ ಪ್ರತಿಯೊಬ್ಬ ಸದಸ್ಯರು ಉತ್ತಮ ಗುಣಮಟ್ಟದ ಹಾಲುಗಳನ್ನು ನೀಡಿದಲ್ಲಿ ಹೆಚ್ಚಿನ ದರವನ್ನು ಪಡೆಯಬಹುದು ಎಂದು ಹೇಳಿದರು.
ಅತಿ ಹೆಚ್ಚು ಹಾಲು ಪೂರೈಕೆದಾರರಿಗೆ ಬಹುಮಾನ ವಿತರಣೆ:
ಸಂಘಕ್ಕೆ 9,125.00 ಲೀಟರ್ ಹಾಲು ಪೂರೈಸಿ ಪ್ರಥಮ ಸ್ಥಾನ ಪಡೆದ ಶಾಂತಿ ಮರಿಯ ಮಾಂತೇರೋ, 6,935.00 ಲೀಟರ್ ಹಾಲು ಪೂರೈಸಿ ದ್ವಿತೀಯ ಸ್ಥಾನ ಪಡೆದ ಲಿಸ್ಸಿ, 6,570.00 ಹಾಲು ಪೂರೈಸಿ ತೃತೀಯ ಸ್ಥಾನ ಪಡೆದ ಸೈಜಿ, 5,840.00 ಲೀಟರ್ ಹಾಲು ಪೂರೈಸಿದ ಜೋಸಿ ರೆಜಿ, 5,475.00 ಲೀಟರ್ ಹಾಲು ಪೂರೈಸಿದ ಜೋಳಿ ಇವರುಗಳನ್ನು ಸಂಘದ ವತಿಯಿಂದ ಬಹುಮಾನ ನೀಡಿ ಗೌರವಿಸಲಾಯಿತು.
ತರಬೇತಿ ಕಾರ್ಯಕ್ರಮ:
ಕರ್ನಾಟಕ ಹಾಲು ಮಹಾ ಮಂಡಳಿ ಬೆಂಗಳೂರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ಕೊಣಾಲು- ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇದರ ಜಂಟಿ ಆಶ್ರಯದಲ್ಲಿ ಕಾನೂನು ಮಾಹಿತಿ ಶಿಬಿರ ನಡೆಯಿತು.
“ಮಹಿಳೆ ಮತ್ತು ಕಾನೂನು” ಎಂಬ ವಿಷಯದ ಮೇಲೆ ಎನ್.ಇಸ್ಮಾಯಿಲ್, ನ್ಯಾಯವಾದಿಗಳು ನೆಲ್ಯಾಡಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಓ.ಜೆ ನೈನಾನ್, ಸೆಬಾಸ್ಟಿನ್, ನೆಲ್ಯಾಡಿ ಹೂರಠಾಣೆ ಹೆಡ್‍ಕಾನ್‍ಸ್ಟೇಬಲ್ ಬಾಲಕೃಷ್ಣ, ಗೋಳಿತೊಟ್ಟು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಜನಾರ್ದನ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.
ಸನ್ಮಾನ :
75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕೊಣಾಲು ಗ್ರಾಮದ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ಜರಗಿತು. ಜಾರ್ಜ್ ವಿ ಎಂ., ಜೇಮ್ಸ್ ಓ ಜೆ., ಎಂ ಎಸ್ ಬೇಬಿ, ತೋಮಸ್, ರೇಜಿ ಕೆ ಎ., ಲಿಸ್ಸಿ ಡೊಮಿನಿಕ್, ಶಾಂತಿ ಸೆ ಬಾಸ್ಟಿನ್, ಜಾನ್ ಕೆ ಎಂ., ಸೆಬಾಸ್ಟಿನ್, ಅಲ್ಫೋನ್ಸ, ಥಾಮಸ್ ಸನ್ಮಾನ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿ ಸೈನಿಕರಾದ ಓ.ಜೆ ನೈನಾನ್ ಮತ್ತು ಸೆಬಾಸ್ಟಿನ್, ನೆಲ್ಯಾಡಿ ಹೂರಠಾಣೆ ಹೆಡ್‍ಕಾನ್‍ಸ್ಟೇಬಲ್ ಬಾಲಕೃಷ್ಣ, ತರಬೇತಿದಾರರಾದ ಎನ್ ಇಸ್ಮಾಯಿಲ್ ರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಅಲ್ಫೋನ್ಸ, ಲಿಸ್ಸಿ ಡೊಮಿನಿಕ್, ಜಾರ್ಜ್ ಮಾತನಾಡಿದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ಮಹಿಳಾ ಸಂಘಕ್ಕೆ ದೊರಕುವ ಯೋಜನೆಗಳ ಬಗ್ಗೆ ಹಾಗೂ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ರೀಮತಿ ನಳಿನಿ ಸ್ಟೆಪ್ ವಿಭಾಗ, ದ.ಕ.ಹಾ.ಒ. ನಿ. ಮಂಗಳೂರು ಮಾಹಿತಿ ನೀಡಿದರು.
ಸಂಘದ ಅಧ್ಯಕೆ ಉಷಾ ಅಂಚನ್ ಅಧ್ಯಕ್ಷ ಸ್ಥಾನದಿಂದ ಮಾತನಾಡಿ ಸಂಘವು 200 ಲೀಟರ್ ಹಾಲು ಸಂಗ್ರಹಣೆಯಿಂದ ಆರಂಭಗೊಂಡು. ಈಗ ಅಧಿಕ ಹಾಲು ಸಂಗ್ರಹಣೆಯೊಂದಿಗೆ ಸಂಘವು ಉತ್ತಮ ಲಾಭದೊಂದಿಗೆ ನಡೆಯುತ್ತಿದ್ದು, ಸದಸ್ಯರು ಉತ್ತಮ ಗುಣಮಟ್ಟದ ಹಾಲು ನೀಡುವುದರಿಂದಲೇ ಲಾಭಗಳಿಸಲು ಸಾಧ್ಯವಾಯಿತು ಎಂದರು. ಇದೀಗ ರೈತರ ಅನುಕೂಲಕ್ಕಾಗಿ ಕೆಎಂಎಫ್ ನವರ ಹಿಂಡಿಯನ್ನು ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಅಲ್ಲದೆ ಸ್ಟೆಪ್ ಯೋಜನೆಯ ಮೂಲಕ ಬಡ್ಡಿ ರಹಿತವಾಗಿ ರಾಸುಗಳ ಖರೀದಿಗೆ 25,000.00 ಸಹಾಯಧನ ನೀಡಲಾಗುವುದು. ಈಗಾಗಲೇ 16 ಜನರು ಇದರ ಪ್ರಯೋಜನ ಪಡೆದಿದ್ದಾರೆ ಎಂದರು. ಗೋಳಿತೊಟ್ಟು ಗ್ರಾಮ ಪಂಚಾಯಿತಿ ನ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದಿಂದ ಸಂಘಕ್ಕೆ 3 ಸೆಂಟ್ಸ್ ಜಾಗ ದೊರಕ್ಕಿದ್ದು. ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಲಿದೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಸಂಘದ ಉಪಾಧ್ಯಕ್ಷೆ ಗಾಯತ್ರಿ ದೇವಿ, ಕಾರ್ಯದರ್ಶಿ ಲೈನಾಜೋಬಿನ್, ನಿರ್ದೇಶಕರಾದ ವಾರಿಜಾಕ್ಷಿ, ಲೀಲಾವತಿ, ಬೇಬಿ, ಸೈಜಿ, ವತ್ಸಲಮ್ಮ, ಜೋಯಿ, ಝುಬೈದ, ಶಾಂತಿ ಮರಿಯ ಮಾಂತೇರೋ, ಶೀಲಾ, ಸುಹಾಸಿನಿ, ಲಿಸ್ಸಿ ಸಹಕರಿಸಿದರು. ಸಂಘದ ಸಿಬ್ಬಂದಿ ಪ್ರಜಲ ವಂದಿಸಿದರು, ಹರ್ಷಿತ ನಿರೂಪಿಸಿದರು.