ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ಮತ್ತು ವಸತಿ ನಿಲಯಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಪೂರನ್ ವರ್ಮ ನೇಮಕ

ಶೇರ್ ಮಾಡಿ

ನೇಸರ ಸೆ.23: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ಮತ್ತು ವಸತಿ ನಿಲಯಗಳ ಆಡಳಿತಯ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಪೂರನ್ ವರ್ಮ ಅವರು ನೇಮಕಗೊಂಡಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿಯ ಕಚೇರಿಯಲ್ಲಿ ಇಂದು (ಸೆ.23)ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಅವರು ಪೂರನ್ ವರ್ಮ ಅವರಿಗೆ ಪುಷ್ಪಗುಚ್ಛ ನೀಡಿ ಅಧಿಕೃತವಾಗಿ ಜವಾಬ್ದಾರಿ ನೀಡಿದರು.
ಬಳಿಕ ಡಾ.ಸತೀಶ್ಚಂದ್ರ ಅವರು ಮಾತನಾಡಿ ಶಿಕ್ಷಣ ಸಂಸ್ಥೆಗಳಲ್ಲಿ ಮಾಹಿತಿ ತಂತ್ರಜ್ಞಾನವು ಅತಿ ಅಗತ್ಯವಾಗಿದೆ. ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ದಿ.ಡಾ.ಬಿ. ಯಶೋವರ್ಮ ಅವರ ಪುತ್ರರಾಗಿರುವ ಪೂರನ್ ವರ್ಮ ಅವರು, ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಅವರಲ್ಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕುರಿತ ಜ್ಞಾನ ಹಾಗೂ ತಮ್ಮ ತಂದೆಯವರೊಂದಿಗಿನ ಒಡನಾಟದ ಅನುಭವದಿಂದ ಸಂಸ್ಥೆಗೆ ಮಹತ್ತರ ರೀತಿಯಲ್ಲಿ ಪ್ರಯೋಜನವಾಗಲಿ ಎಂದರು ಹಾಗೂ ಶುಭ ಹಾರೈಸಿದರು.

ಪೂರನ್ ವರ್ಮ ಅವರು ಮಾತನಾಡಿ, “ತಂತ್ರಜ್ಞಾನವು ಬದಲಾಗುತ್ತ ಇದ್ದ ಹಾಗೆ ಬದಲಾವಣೆಗಳಿಗೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ. ತಂತ್ರಜ್ಞಾನಕ್ಕೆ ಒಗ್ಗಿ ಹೋಗಿರುವ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳೂ ಬದಲಾವಣೆ ಕಂಡುಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ನೂತನ ಆವಿಷ್ಕಾರ, ತಂತ್ರಜ್ಞಾನಗಳನ್ನು ನಮ್ಮದಾಗಿಸಿಕೊಳ್ಳುತ್ತ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ” ಎಂದರು.
ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಹರೀಶ್ ಎಂ.ವೈ. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

See also  ಜೇಸಿಐ ಇಂಡಿಯ ವಲಯ 15 ರ "ZOTS 2022"

Leave a Reply

Your email address will not be published. Required fields are marked *

error: Content is protected !!