ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲಕರ ತಂಡ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

ಶೇರ್ ಮಾಡಿ

ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುದ್ಮಾರು ಇದರ ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ತಂಡದಲ್ಲಿ ಮೋಕ್ಷಿತ್(ನೇರಳಕಟ್ಟೆ ನಿವಾಸಿ ಜಗದೀಶ್ ಮತ್ತು ಪ್ರೇಮ ಇವರ ಪುತ್ರ), ಪ್ರೀತಮ್(ಮಿತ್ತೂರು ನಿವಾಸಿ ಜಯಂತ ಗೌಡ ಮತ್ತು ಲೀಲಾವತಿ ಇವರ ಪುತ್ರ), ರಿತೇಶ್(ಕಬಕ ನಿವಾಸಿ ವೆಂಕಪ್ಪ ಮತ್ತು ವೀಣ ಇವರ ಪುತ್ರ), ತ್ರಿಜಲ್(ಕೈಕಾರ ನಿವಾಸಿ ವಿನೋದ್ ಮತ್ತು ಶರಿಕ ಇವರ ಪುತ್ರ), ಎಂ.ಪ್ರಣಾಮ್ (ಮಿನಾವು ನಿವಾಸಿ ಕೇಶವ ಮತ್ತು ಶುಭಶ್ರೀ ಇವರ ಪುತ್ರ), ಧನ್ವಿತ್.ಎಂ(ಬಲ್ನಾಡು ನಿವಾಸಿ ಕೆ.ಮಾಧವ ಗೌಡ ಮತ್ತು ಯಶೋಧ ಇವರ ಪುತ್ರ), ವೈಶಾಖ್(ಬುಳ್ಳೇರಿಕಟ್ಟೆ ನಿವಾಸಿ ಗಣೇಶ್ ಎಮ್ ಮತ್ತು ಸರಸ್ವತಿ.ಪಿ ಇವರ ಪುತ್ರ), ಚಿನ್ಮಯ್(ಒಳತ್ತಡ್ಕ ನಿವಾಸಿ ಸೇಸಪ್ಪ ಮತ್ತು ಚಂದ್ರಿಕಾ ಇವರ ಪುತ್ರ), ನಮನ್(ದಯಾನಂದ ಗೌಡ ಮತ್ತು ವಿಮಲಾ ಇವರ ಪುತ್ರ), ತನುಷ್( ಪಾಂಡುರAಗ.ಕೆ ಮತ್ತು ಕುಸುಮ.ಕೆ ಇವರ ಪುತ್ರ) ತೃತೇಶ್(ಅಶೋಕ್.ಬಿ.ಬಿ ಮತ್ತು ಪೂರ್ಣಿಮಾ ಇವರ ಪುತ್ರ) ಮತ್ತು ನಿವೇದ್ ( ರಾಜೇಶ್ ಮತ್ತು ಅಶ್ವಿನಿ ಇವರ ಪುತ್ರ), ಮತ್ತು ಮನ್ವಿತ್ ನೆಕ್ಕರೆ(ಉಮೇಶ್ ನೆಕ್ಕರೆ ಮತ್ತು ಕವಿತ ಇವರ ಪುತ್ರ) ಭಾಗವಹಿಸಿರುತ್ತಾರೆ.
8ನೇ ತರಗತಿಯ 14ರ ವಯೋಮಾನದ ಆಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಶಾಲೆಯ ಮನ್ವಿತ್ ನೆಕ್ಕರೆ ಆಯ್ಕೆಯಾಗಿದ್ದು, ಸೆ.26ರಂದು ದ.ಕ.ಜಿ.ಪ.ಹಿ.ಪ್ರಾಥಮಿಕ ಶಾಲೆ, ಪಡಂಗಡಿ, ಬೆಳ್ತಂಗಡಿ ಇಲ್ಲಿ ನಡೆಯುವ ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾನೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

error: Content is protected !!