ಅ.01 ನೆಲ್ಯಾಡಿಯ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ವಾಲಿಬಾಲ್ ಕ್ರೀಡಾ ಪಟುಗಳ ಪ್ರದರ್ಶನ ಪಂದ್ಯಾಟ

ಶೇರ್ ಮಾಡಿ

ನೆಲ್ಯಾಡಿ: ಅ.01 ರಂದು ನೆಲ್ಯಾಡಿಯ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಗುಜರಾತ್ ನಲ್ಲಿ ನಡೆಯಲಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟುಗಳು ಪ್ರದರ್ಶನ ಪಂದ್ಯಾಟ ನೀಡಲಿದ್ದಾರೆ.
ಈ ಬಾರಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನೆಚ್ಚಿನ ತಂಡವೆಂದೆ ಪರಿಗಣಿಸಲ್ಪಟ್ಟ ಕರ್ನಾಟಕ ತಂಡ ರಾಷ್ಟ್ರೀಯ ಆಟಗಾರರನ್ನು ಪ್ರತಿನಿಧಿಸುತಿದ್ದು, ನಾಳೆ ಬೆಳಿಗ್ಗೆ 9.15 ರಿಂದ ಪಂದ್ಯಾಟ ಆರಂಭವಾಗಲಿದೆ, ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಂಡಕ್ಕೆ ಶುಭ ಹಾರೈಸಬೇಕೆಂದು ಸಂಘಟಕರು ತಿಳಿಸಿದರು.

Leave a Reply

error: Content is protected !!