
ನೇಸರ ಡಿ08: ಗಾಂಧೀಜಿಯ ಭಾವಚಿತ್ರವನ್ನು ಕೇವಲ 20 ನಿಮಿಷದಲ್ಲಿ ಚಿತ್ರಿಸುವ ಮೂಲಕ 5ನೇ ಬಾರಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ 21ರ ಹರೆಯದ ನೆಲ್ಯಾಡಿಯ ಪರೀಕ್ಷಿತ್.
ನೆಲ್ಯಾಡಿಯ ಕುಂಡಡ್ಕ ನಿವಾಸಿ ನಿವೃತ್ತ ಆರೋಗ್ಯಾಧಿಕಾರಿ ಜನಾರ್ದನ ಶೆಟ್ಟಿ -ಮಿನಾಕ್ಷಿ ದಂಪತಿಗಳ ಮೊಮ್ಮಗ ಹಾಗೂ ಶ್ರೀಧರ ಮತ್ತು ಸುಧಾಮಣಿ ದಂಪತಿಯ ಪುತ್ರ.ಮಂಗಳೂರಿನ ಟಿವಿಎಸ್ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ಪರೀಕ್ಷಿತ್ ಈ ಸಾಧನೆಯ ರುವಾರಿ. ಎ1 ಶೀಟ್ ನಲ್ಲಿ ಬ್ಲೂ ಇಂಕ್ ಪ್ಯಾಡ್ ಸಹಾಯದೊಂದಿಗೆ ಹೆಬ್ಬೆರಳು ಮತ್ತು ತೋರು ಬೆರಳುಗಳನ್ನು ಬಳಸಿಕೊಂಡು 20 ನಿಮಿಷದಲ್ಲಿ ಗಾಂಧೀಜಿಯ ಭಾವಚಿತ್ರವನ್ನು ಬಿಡಿಸಿ ಆ ಮೂಲಕ ವಿಶ್ವ ದಾಖಲೆಯನ್ನು ಮಾಡಿದ್ದಾರೆ.
ಬಾಲ್ಯದಿಂದ 9ನೇ ತರಗತಿವರೆಗೆ ನೆಲ್ಯಾಡಿಯ ಜ್ಞಾನೋದಯ ಬೆಥನಿ ಶಾಲೆಯಲ್ಲಿ ಕಲಿತು ನಂತರ 10ನೇ ತರಗತಿಯಿಂದ ಪಿಯುಸಿವರೆಗಿನ ಶಿಕ್ಷಣವನ್ನು ಮಂಗಳೂರಿನ ಗೋಪಾಡ್ಕರ್‌ರವರ ಸ್ವರೂಪ ಸಂಸ್ಥೆಯಲ್ಲಿ ಪೂರೈಸಿದರು. ಅಲ್ಲಿನ ಮಾರ್ಗದರ್ಶಕರ ಸಹಾಯದಿಂದ ಯಕ್ಷಗಾನ, ಭರತನಾಟ್ಯ, ಗಿಟಾರ್, ಕ್ರೀಯೇಟೀವ್ ಆರ್ಟ್, ವಿಶುವಲ್ ಆರ್ಟ್, ಬೀಟ್ ಬಾಕ್ಸ್ ನಲ್ಲೂ ಪರಿಣಿತರಾದರು.

ಈ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಅವರ ಭಾವಚಿತ್ರವನ್ನು ಪೇಪರ್ ಕಟ್ಟಿಂಗ್ ಆರ್ಟ್( ಸ್ಟೆನ್ಸಿಲ್ )ನ ಮೂಲಕ ಚಿತ್ರಿಸಿ ಸ್ಥಳದಲ್ಲಿ ಅವರಿಂದ ಗೌರವಾರ್ಪಣೆಯನ್ನು ಸ್ವೀಕರಿಸಿದ್ದಾರೆ. ಇವರ ಸಾಧನೆಗಾಗಿ ಹಲವು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿವೆ. ಭವಿಷ್ಯದಲ್ಲಿ ಗಿನ್ನಿಸ್ ರೆಕಾರ್ಡ್ ಮಾಡುವ ಕುರಿತು ಯೋಜನೆಯಿದ್ದು, ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ.

ಇವರೆಗಿನ ವಿಶ್ವ ದಾಖಲೆಗಳು
3.12 ಸೆಕೆಂಡುಗಳಲ್ಲಿ ಪ್ರಧಾನಿ ಮೋದಿಯವರ ಚಿತ್ರವನ್ನು ರಚಿಸಿದ್ದಕ್ಕಾಗಿ -ವಲ್ಡ್ ಫಾಸ್ಟೆಸ್ಟ್ ಪೇಪರ್ ಕಟ್ಟಿಂಗ್ (ಬಿಳಿ ಮತ್ತು ಕಪ್ಪು ಡ್ರಾಯಿಂಗ್ ಶೀಟ್ ಬಳಸಿಕೊಡು ರಚಿಸುವ ಚಿತ್ರ) ಆರ್ಟಿಸ್ಟ್ ಎಂಬ ಪ್ರಮಾಣ ಪತ್ರ.5 ನಿಮಿಷಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಫೈರ್ ಆರ್ಟ್ (ಬೆಂಕಿಯ ದೀವಟಿಗೆಯನ್ನು ಪೇಪರ್‌ಗೆ ಹಿಡಿದು ಆ ಮೂಲಕ ಭಾವಚಿತ್ರ ಬಿಡಿಸುವ ಕಲೆ) ಎಂಬ ಪರಿಕಲ್ಪನೆಯ ಮೂಲಕ ಜಗತ್ತಿಗೆ ಪರಿಚಿಸಿದ ಮೊದಲಿಗರು.
35 ವಿದ್ಯಾರ್ಥಿಗಳನ್ನೊಳಗೊಂಡ ಟೀಂನ ಲೀಡರ್ ಆಗಿ 30ಘಿ30 ಫೀಟ್ ಎತ್ತರದ ಲಾರ್ಜ್ ಮೋಸ್ಟ್ ಪೇಪರ್ ಕಟ್ಟಿಂಗ್ ಅನ್ನುವ ಪರಿಕಲ್ಪನೆಯಲ್ಲಿ ಮೂಲಕ ಐರನ್ ಮ್ಯಾನ್ ಆಫ್ ಇಂಡಿಯಾ 1 ಗಂಟೆಯ ಅವಧಿಯಲ್ಲಿ “ಎಕ್ಸ್ಕ್ಲೂಸಿವ್ ವಲ್ಡ್ ರೆಕಾರ್ಡ್” ಮತ್ತು “ವಲ್ಡ್ ರೆಕಾರ್ಡ್ ಆಫ್ ಇಂಡಿಯಾ” ಎನ್ನುವ 2 ವಿಶ್ವ ದಾಖಲೆ.
20 ನಿಮಿಷಗಲ್ಲಿ ನೀಲಿ ಇಂಕ್ ಪ್ಯಾಡ್ ಅನ್ನು ಬಳಸಿಕೊಂಡು ಹೆಬ್ಬೆರಳು ಮತ್ತು ತೋರು ಬೆರಳಿನ ಸಹಾಯದಿಂದ ಗಾಂಧೀಜಿಯ ಬಾವಚಿತ್ರವನ್ನು ರಚಿಸಿ ವಿಶ್ವದಾಖಲೆ.
ಜಾಹೀರಾತು

