ವಿದ್ಯಾಸಂಸ್ಥೆಗಳು ರಾಮ ರಾಜ್ಯದ ನಿರ್ಮಾಣದ ಶಿಕ್ಷಣ ನೀಡುವಂತಾಗಬೇಕು: ಡಾ.ಪ್ರಭಾಕರ ಭಟ್

ಶೇರ್ ಮಾಡಿ

ನೇಸರ ಡಿ08: ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ ಇದರ ದಶಮಾನೋತ್ಸವದ ನೆನಪಿಗಾಗಿ ನಿರ್ಮಾಣಗೊಂಡ ವಿದ್ಯಾಮಂದಿರ “ದಾಶರಥಿಯ” ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ರವರು ಸ್ವಾರ್ಥರಹಿತ ಚಿಂತನೆಯ ಭಾರತ ನಿರ್ಮಾಣವಾಗಬೇಕಾದರೆ ನಮ್ಮ ಧರ್ಮ ಸಂಸ್ಕೃತಿ ಉಳಿಯಬೇಕು ಮನೆಮನೆಯಲ್ಲೂ ರಾಮ ನಾಮದ ಸ್ಮರಣೆ ನಡೆಯುವಂತಹ ಭಾರತೀಯ ಮೌಲ್ಯದ ಶಿಕ್ಷಣ ಸಿಗಬೇಕು ಇದು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯ ಎಂದರು.
ದಿನಾಂಕ 08-12-21 ರ ಬುಧವಾರದಂದು ನಡೆದ “ದಾಶರಥಿಯ” ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನೂತನ ಕೊಠಡಿಗಳನ್ನು ಹಿರಿಯ ಕೃಷಿಕ ಈಶ್ವರ ನಾಯಕ್ ಉದ್ಘಾಟಿಸಿದರು. ಶಂಕರ್ ಸಮೂಹ ಸಂಸ್ಥೆಗಳ ಸತ್ಯಶಂಕರ್.ಕೆ ದೀಪ ಬೆಳಗಿಸಿದರು. ಶೌಚಾಲಯ ಸಂಕೀರ್ಣದ ಭೂಮಿಪೂಜೆಯನ್ನು ವಿಶ್ರಾಂತ ಡೀನ್ ಪಶುವೈದ್ಯಕೀಯ ಕಾಲೇಜ್ ಹೆಬ್ಬಾಳ ಬೆಂಗಳೂರು ಡಾ.ಎಂ.ನಾರಾಯಣ ಭಟ್ ನೆರವೇರಿಸಿದರು.


ವಿಶಾಲ ಕ್ರೀಡಾಂಗಣವನ್ನು ರಾಜಾರಾಮ್.ಎನ್ ಶೆಟ್ಟಿ ಜನರಲ್ ಮ್ಯಾನೇಜರ್ ಭಾರತೀಯ ರಿಸರ್ವ್ ಬ್ಯಾಂಕ್ ಮೈಸೂರು ನಡೆಸಿಕೊಟ್ಟರು.
ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಮುರಳಿಧರ್ ವೈ.ಕೆ ಅಶ್ವಿನಿ ಆಸ್ಪತ್ರೆ ನೆಲ್ಯಾಡಿ ಮಾತನಾಡಿ ಮೂಲಸೌಕರ್ಯಗಳಿಗೆ ಕೊರತೆಯಾಗದಂತೆ ಈ ಶಾಲೆ ನಿರ್ಮಾಣವಾಗಬೇಕು ಪ್ರಜ್ಞಾವಂತ ನಾಗರಿಕರನ್ನು ಕೊಡುವ ಆಶ್ರಯ ತಾಣವಾಗಲಿ ಈ ಸಂಸ್ಥೆ ಎಂದು ಹಾರೈಸಿದರು.

ಶಂಕರ್ ಸಮೂಹ ಸಂಸ್ಥೆಯ ಸತ್ಯಶಂಕರ್.ಕೆ ಮನೆ ಮೊದಲ ಪಾಠಶಾಲೆಯಾದರೆ ನಿಜ ಅರ್ಥದ ಜ್ಞಾನ ಸಿಗುವುದು ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಬದುಕಿಗೆ ಸಹಾಯವಾಗುವ ಸ್ವದ್ಯೋಗ ಅವಕಾಶಗಳನ್ನು ನೀಡುವ ಶಿಕ್ಷಣ ಸಿಗಬೇಕು ಎಂದು ನುಡಿದರು. ಶ್ರೀಮತಿ ಚೇತನ ಗ್ರಾಮ ಪಂಚಾಯತ್ ಅಧ್ಯಕ್ಷರು ನೆಲ್ಯಾಡಿ, ಲೋಕೇಶ್.ಸಿ ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು, ಡಾ.ಕೆ.ಎಂ.ಕೃಷ್ಣ ಭಟ್ ದಶಮಾನೋತ್ಸವ ಸಮಿತಿಯ ಕಾರ್ಯದರ್ಶಿಗಳು ವಿವೇಕಾನಂದ ವಿದ್ಯಾವರ್ಧಕ ಸಂಘ, ಶ್ರೀಧರ್ ಗೊರೆ ಅಧ್ಯಕ್ಷರು ದಶಮಾನೋತ್ಸವ ಸಮಿತಿ, ಜಯಪ್ರಕಾಶ್ ನೆಕ್ರಾಜೆ, ಕೃಷ್ಣಶೆಟ್ಟಿ ಕಡಬ, ರವಿಚಂದ್ರ ಹೊಸವಕ್ಲು, ಬಾಲಕೃಷ್ಣ ಬಾಣಜಾಲು,ಗಣೇಶ್ ವಾಗ್ಲೆ ಮೊದಲಾದವರು ಉಪಸ್ಥಿತರಿದ್ದರು.
ಜಯಪ್ರಕಾಶ್ ನೆಕ್ರಾಜೆ ಸ್ವಾಗತಿಸಿ ಶಾಲೆ ನಡೆದು ಬಂದ ಹಾದಿಯ ವಿವರ ನೀಡಿದರು. ನಿವೇಶನವೇ ಇಲ್ಲದ ಕಾಲದಲ್ಲಿ ಮಾತೃ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಆಶ್ರಯದಲ್ಲಿ ಆರಂಭವಾದ ಸಂಸ್ಥೆ. 3 ಕುಟಿರಗಳನ್ನೊಳಗೊಂಡ ತಾತ್ಕಾಲಿಕ ಕಟ್ಟಡದ ಮೂಲಕ ಆರಂಭವಾಯಿತು,ದಾನಿಗಳ ನೇರವೇ ಆಧಾರಸ್ತಂಭವಾಗಿ ಇಂದು ಶಾಶ್ವತ ಕಟ್ಟಡ ಲೋಕಾರ್ಪಣೆಯಾಗುತ್ತಿದೆ ಎಂದರು.


ದಾನಿಗಳ ನೆರವು
ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ 25,00,000, ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯಿಂದ, ಈಶ್ವರ ನಾಯ್ಕ ಅವರಿಂದ ಒಂದು ಕೊಠಡಿಯ ವೆಚ್ಚ, ಒಟ್ಟು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ರವರ 5 ಲಕ್ಷ ರೂ ಅನುದಾನದಲ್ಲಿ ವಿಶಾಲ ಕ್ರೀಡಾಂಗಣ ನಿರ್ಮಾಣ,ಏನ್ ಎಂ ಪಿ ಟಿ ಅವರ ಪಿ. ಎಸ್. ಆರ್ ಫಂಡ್ ನಿಂದ ಶೌಚಾಲಯ ನಿರ್ಮಾಣ, ರಾಮಚಂದ್ರಪುರದ ಮಠದಿಂದ ಬಿಸಿಯೂಟದ ವ್ಯವಸ್ಥೆ.

ಮುಂದಿನ ಯೋಜನೆಗಳು
ಉಳಿದ ಆರು ಕೊಠಡಿಗಳ ನಿರ್ಮಾಣಕ್ಕೆ ಕೋಟ ಶ್ರೀನಿವಾಸ ಪೂಜಾರಿಯವರ ಅನುದಾನದ ಭರವಸೆ. ಎಂ ಎಲ್ ಸಿ ಪ್ರತಾಪ್ ನಾಯಕ್ ರವರಿಂದ 5ಲಕ್ಷ ಅನುದಾನದ ಭರವಸೆ. ಗ್ರಂಥಾಲಯ ಮತ್ತು ಅಡಿಗೆ ಕೋಣೆಯ ನಿರ್ಮಾಣ ಮತ್ತು ಶಿಶುಮಂದಿರದ ಹೊರಾಂಗಣ ಆಟದ ಮೈದಾನದ ಯೋಜನೆ, ಶ್ರೀಕ್ಷೇತ್ರ ಸುಬ್ರಹ್ಮಣ್ಯದಿಂದ ಸಮವಸ್ತ್ರ ಮತ್ತು ಪುಸ್ತಕ ಪರಿಕರಗಳ ನೀಡುವ ಯೋಜನೆ.
ಮುಂದಿನ ವರುಷದಿಂದ ಹೊಸ ಶಿಕ್ಷಣ ನೀತಿಯ ಪ್ರಕಾರ ಶಿಕ್ಷಣ ನೀಡಲಾಗುವುದು ಹಾಗೂ ಮುಂದಿನ ಶೈಕ್ಷಣಿಕ ವರ್ಷದಿಂದ 9ರಿಂದ ಇಂಗ್ಲೀಷ್ ಮಾಧ್ಯಮ ಶಿಕ್ಷಣವನ್ನು ಆರಂಭಿಸಲಾಗುವುದು.

ಸುಬ್ರಾಯ ಪುಣಚ ವಂದಿಸಿದರು, ಶಿಕ್ಷಕ ಅನಿಲ್ ಅಕ್ಕಪಾಡಿ ಮತ್ತು ಬಾಗಿರಥಿ ನಿರೂಪಿಸಿದರು.

ಜಾಹೀರಾತು

Leave a Reply

error: Content is protected !!