ನೆಲ್ಯಾಡಿ: ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಜೇಸಿ.ವಿಶ್ವನಾಥ ಶೆಟ್ಟಿ ಕೆ., ಯವರು ಉಪನ್ಯಾಸಕ ವೃತ್ತಿಯೊಂದಿಗೆ ಸಾಂಸ್ಕೃತಿಕವಾಗಿ ಹಾಗೂ ಸಾಹಿತ್ಯಕವಾಗಿ ಕಲಾ ಸೇವೆಯಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ವಲಯ 15ರ ಜೇಸಿ ಸಂಸ್ಥೆಯು ನೀಡುವ ಅತ್ಯುತ್ತಮ ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಕಲಾ ರತ್ನ ಪ್ರಶಸ್ತಿ ಗೆ ಬಾಜನರಾಗಿದ್ದಾರೆ.
ಅಕ್ಟೋಬರ್ 16ರಂದು ಬೆಳ್ಮಣ್ಣಿನಲ್ಲಿ ನಡೆಯುವ ಜೇಸಿ ವಲಯ ವ್ಯವಹಾರ ಸಮ್ಮೇಳನದಲ್ಲಿ ಜೇಸಿ ವಲಯ ಅಧ್ಯಕ್ಷರು ಹಾಗೂ ಅತಿಥಿ ಗಣ್ಯರ ಸಮ್ಮುಖದಲ್ಲಿ ಜೇಸಿ ಸಂಸ್ಥೆಯ ಅತ್ಯಂತ ಪ್ರತಿಷ್ಠೆಯ ಕಲಾ ರತ್ನ ಪ್ರಶಸ್ತಿ ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ.
ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಕೆಲಸವನ್ನು ನಿರ್ವಹಿಸುತ್ತಾ 2018ರಲ್ಲಿ ನೆಲ್ಯಾಡಿ ಜೇಸಿಐ ನ ಘಟಕಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಮ್ಯೂಸಿಕ್, ಯಕ್ಷಗಾನ, ಡ್ರಾಮಾ ನಿರ್ದೇಶಕರಾಗಿ ಹಾಗೂ ನಟರಾಗಿ, ಮ್ಯೂಸಿಕ್ ನಿರ್ದೇಶಕರಾಗಿ, ಕನ್ನಡ ಹಾಗೂ ತುಳು ನಾಟಕಗಳಲ್ಲಿ ಹಾಡುಗಾರರಾಗಿ, ಸಂಗೀತ ನಿರ್ದೇಶಕರಾಗಿ, ಕೀಬೋರ್ಡ್ ಪ್ಲೇಯರ್ ಆಗಿ, ಹವ್ಯಾಸಿ ಬರಹಗಾರರಾಗಿ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿ, ಕಾರ್ಯಕ್ರಮ ನಿರೂಪಕರಾಗಿ ಕೆಲಸ ನಿರ್ವಹಿಸಿದ್ದಾರೆ.
ದುಬೈ ಹಾಗೂ ಕುವೈತ್ ನಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ.
ಇವರ ಕಲಾ ಸಾಧನೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕಲಾ ಆಸಕ್ತ ವಿದ್ಯಾರ್ಥಿಗಳಿಗಾಗಿ ಲಹರಿ ಸಂಗೀತ ಕಲಾ ಕೇಂದ್ರ ವನ್ನು ನೆಲ್ಯಾಡಿ ಯಲ್ಲಿ ಆರಂಭಿಸಿ ತರಬೇತಿಯನ್ನು ನೀಡುತ್ತಿದ್ದಾರೆ.