ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ಬೀದಿಮಡೆಸ್ನಾನ

ಶೇರ್ ಮಾಡಿ

ನೇಸರ ಡಿ09: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಠ ಸೇವೆಯಲ್ಲೊಂದಾದ ಬೀದಿಮಡೆಸ್ನಾನ (ಉರುಳು ಸೇವೆ)ವನ್ನು ಲಕ್ಷ ದೀಪೋತ್ಸವದ ರಥೋತ್ಸವ ಆದ ಬಳಿಕ ಆರಂಭಿಸಿ, ಚಂಪಾಷಷ್ಠಿ ಮಹಾರಥೋತ್ಸವದ ತನಕ ನೆರವೇರಿಸುತ್ತಾರೆ.
ಅನೇಕ ಮಂದಿ ಭಕ್ತರು ಹಿಂದೆ ತಾವು ಪ್ರಾರ್ಥಿಸಿಕೊಂಡ ತಮ್ಮ ಇಷ್ಟಾರ್ಥ ನೆರವೇರಿದ ವಿಷಯವಾಗಿ ದೇವರ ಎದುರು ಪ್ರಾರ್ಥನೆ ಸಲ್ಲಿಸಿ ಅರ್ಚಕರಿಂದ ಪ್ರಸಾದವನ್ನು ಸ್ವೀಕರಿಸಿದ ನಂತರ ಕುಮಾರಧಾರ ಸ್ನಾನ ಘಟ್ಟಕ್ಕೆ ತೆರಳಿ ನದಿಯಲ್ಲಿ ಮಿಂದು ಅಲ್ಲಿಂದ ಉರುಳು ಸೇವೆ ಪ್ರಾರಂಭ ಮಾಡುತ್ತಾರೆ ಮುಂದುವರಿದಂತೆ ಮುಖ್ಯ ರಸ್ತೆಗೆ ಬಂದು ಅಲ್ಲಿಂದ ಕಾಶಿಕಟ್ಟೆ ಗಣಪತಿ ದೇವರ ಎದುರಿನಿಂದಾಗಿ ರಥಬೀದಿಗೆ ಬರುತ್ತಾರೆ ಅಲ್ಲಿಂದ ಪಶ್ಚಿಮದ ಮಹಾದ್ವಾರದ ಮೂಲಕ ಹೊರಾಂಗಣಕ್ಕೆ ಬಂದು ದೇವಳಕ್ಕೆ ಪ್ರದಕ್ಷಿಣೆ ಹಾಕಿ ಮೂಡು ಬಾಗಿಲಿನಲ್ಲಿ ಹೊರ ಹೋಗಿ ಎದುರಿನ ದರ್ಪಣ ತೀರ್ಥ ನದಿಗೆ ಬಿದ್ದು ತಮ್ಮ ಉರುಳುಸೇವೆಯನ್ನು ಸಮಾಪ್ತಿ ಮಾಡುತ್ತಾರೆ ನಂತರ ದರ್ಪಣ ತೀರ್ಥದಲ್ಲಿ ಸ್ನಾನ ಆಗಿ ಶ್ರೀ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸುತ್ತಾರೆ. ಈ ಸೇವೆಯನ್ನು ಭಕ್ತರು ಸ್ವಯಂ ಸ್ಪೂರ್ತಿಯಿಂದ ಮತ್ತು ಭಕ್ತಿಯಿಂದ ನೆರವೇರಿಸುತ್ತಾರೆ ಹಾಗೆ ಈ ಸೇವೆಗೆ ಯಾವುದೇ ಶುಲ್ಕವಿರುವುದಿಲ್ಲ. ಸುಮಾರು 2 ಕಿಲೋಮೀಟರಿನಷ್ಟಿರುವ ದೂರವನ್ನು ಉರುಳು ಸೇವೆ ಮಾಡುವ ಭಕ್ತರು ಅವರವರ ಅನೂಕೂಲಕ್ಕೆ ತಕ್ಕಾಗೆ 1 ರಿಂದ 5 ಗಂಟೆ ವರೆಗೂ ತೆಗೆದುಕೊಳ್ಳುತ್ತಾರೆ.

ವೃತನಿಷ್ಠ ಸೇವೆ:
ಉರುಳು ಸೇವೆ ಮಾಡುವವರು ಮೊದಲೇ ಅನೇಕ ದಿನಗಳಿಂದ ವೃತವನ್ನು ಕೈಗೊಂಡಿರುತ್ತಾರೆ. ಶ್ರೀ ಕುಕ್ಕೆ ಪುರವಾಸನನ್ನು ಆರಾಧಿಸುವ ಅತೀ ದೊಡ್ಡ, ಕಠಿಣ ಹಾಗೂ ವಿಶಿಷ್ಟ ಸೇವೆ ಇದಾಗಿದ್ದು, ಪುರುಷ, ಮಹಿಳೆ, ಮಕ್ಕಳು ಹಾಗೂ ವೃದ್ದರೂ ಈ ಸೇವೆಯನ್ನು ಮಾಡುತ್ತಾರೆ. ಹೀಗೆ ಉರುಳು ಸೇವೆ ಮಾಡುವವರ ಜತೆಯಲ್ಲಿ ದಾಸಯ್ಯರು ತಮ್ಮ ಶಂಖ ಜಾಗಟೆಯೊಂದಿಗೆ ಗೋವಿಂದಾ ಅನ್ನಿ ಗೋವಿಂದಾ ಕೂಗುತ್ತಾ ದೇವರ ಪರಾಕುಗಳನ್ನು ಹೇಳುತ್ತಾ ಸಾಗುತ್ತಾರೆ. ಅನೇಕ ವರ್ಷಗಳಿಂದ ಸತತವಾಗಿ ಈ ಕಠಿಣವಾದ ಸೇವೆಯನ್ನು ಸಲ್ಲಿಸುವ ಅಸಂಖ್ಯಾತ ಭಕ್ತರೂ ಇದ್ದಾರೆ ಹಾಗೂ ಈ ಸೇವೆಯಿಂದಾಗಿ ಭಕ್ತರ ಸಂಕಷ್ಠಗಳು, ರೋಗರುಜಿನಗಳು ನಿವಾರಣೆಯಾದ ಉದಾಹರಣೆಗಳಿವೆ. ಹೆಚ್ಚಾಗಿ ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಭಕ್ತರು ಈ ಸೇವೆಯನ್ನು ಆರಂಭಿಸುತ್ತಾರೆ. ಜಾತಿ, ಮತ, ಲಿಂಗ, ವರ್ಗ, ಪ್ರಾಯ, ಭೇದ ಮರೆತು ದೇವರಿಗೆ ಸಂಪೂರ್ಣ ಶರಣಾಗುವ ಈ ಹರಕೆ ಸೇವೆಗಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ.

ಈ ಸಲ ಚತುಷ್ಪಥದ ಒಂದು ಬದಿಯ ರಸ್ತೆಯನ್ನು ಪೂರ್ತಿಯಾಗಿ ಈ ಸೇವೆಗೆ ಮೀಸಲಿಡಲಾಗಿದ್ದು ಸುಮಾರು 300ಕ್ಕೂ ಅಧಿಕ ಊರಿನ ಸ್ವಯಂ ಸೇವಕರು, ನಮ್ಮ ಕಾಲೇಜು ಹಾಗು ಪ್ರೌಢ ಶಾಲಾ ಮಕ್ಕಳು, ದೇವಳದ ಸಿಬಂದಿಗಳು ಸೇರಿದಂತೆ ಉರುಳು ಪಥಕ್ಕೆ ಮೀಸಲಿಟ್ಟ ರಸ್ತೆಯನ್ನು ಗುಡಿಸಿ ನೀರಿನಲ್ಲಿ ತೊಳೆದು ತೋರಣಗಳಿಂದ ಸಿಂಗಾರಗೊಳಿಸಿರುತ್ತಾರೆ.
ದೇವಾಲಯದ ವತಿಯಿಂದ ಗ್ರಹ ರಕ್ಷಕ ದಳವನ್ನು ರಾತ್ರಿಯೂ ಕೂಡ ನಿಯೋಜಿಸಲಾಗಿದೆ ಇವರೊಂದಿಗೆ ಸ್ಥಳೀಯ ಸಂಘ ಸಂಸ್ಥೆಗಳು ಕೂಡ ಭಾಗಿಯಿದ್ದು ಉರುಳು ಸೇವೆ ಮಾಡೋ ಭಕ್ತಾದಿಗಳ ಯೋಗ ಕ್ಷೇಮ ನೋಡಿಕೊಳ್ಳು
ತ್ತಿದ್ದಾರೆ.

Leave a Reply

error: Content is protected !!