ಜೇಸಿ. ಕಿಶೋರ್ ಆಚಾರ್ಯ ಅವರಿಗೆ ಜೇಸಿ ವಲಯ 15 ರ ಪ್ರತಿಷ್ಠಿತ ಉದ್ಯಮ ರತ್ನ ಪ್ರಶಸ್ತಿ

ಶೇರ್ ಮಾಡಿ

ಬಂಟ್ವಾಳ: ಅಕ್ಟೋಬರ್ 16 ರಂದು ಬೆಳ್ಮಣ್ ಜೇಸಿ ಘಟಕದ ಆತಿಥ್ಯದಲ್ಲಿ ಮುಹೂರ್ತ ಸಭಾಭವನದಲ್ಲಿ ನಡೆದ ಜೇಸಿಐ ವಲಯ 15ರ ವ್ಯವಹಾರ ವಿಭಾಗದ ಸಮ್ಮೇಳನ ಸಂಚಲನ ದಲ್ಲಿ ಜೇಸಿಐ ಬಂಟ್ವಾಳದ ಉಪಾಧ್ಯಕ್ಷ ಜೇಸಿ ಕಿಶೋರ್ ಆಚಾರ್ಯ ಅವರ ಉದ್ಯಮ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರು ಕೈಕಂಬದ ಶ್ರೀ ಲಕ್ಷ್ಮೀ ಆಭರಣ ಮಳಿಗೆ ಹಾಗೂ ತಲಪಾಡಿ ವೇದ ರೆಸಿಡೆನ್ಸಿಯ ಮಾಲಕರಾಗಿದ್ದು ವಿಶ್ವಕರ್ಮ ಸಂಘ ದ ಸಕ್ರಿಯ ಸದಸ್ಯರು ಹೌದು, ಸುಮಾರು 13 ಭಾರಿ ರಕ್ತದಾನ ಮಾಡಿ 8 ಕ್ಕಿಂತಲೂ ಅಧಿಕ ಬಡ ವಿಧ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ಮಾಡಲು ಆರ್ಥಿಕ ನೆರವು ನೀಡಿರುತ್ತಾರೆ.
ಈ ಪ್ರಶಸ್ತಿ ಸ್ವೀಕರಿಸುವ  ಸಂದರ್ಭದಲ್ಲಿ ವಲಯ ಅಧ್ಯಕ್ಷ ಜೇಸಿಐ ಸೆನೆಟರ್ ರಾಯನ್ ಉದಯ್ ಕ್ರಾಸ್ತಾ, ಜೇಸಿ ಪುರುಷೋತ್ತಮ್ ಶೆಟ್ಟಿ, ಜೇಸಿ.ಸೌಮ್ಯ ರಾಕೇಶ್, ಜೇಸೀರೆಟ್ ಅನುಷಾ, ಬಂಟ್ವಾಳ ಜೇಸಿಐ ನ ಅಧ್ಯಕ್ಷರು ,ಪೂರ್ವ ಅಧ್ಯಕ್ಷರು, ವಲಯ ಅಧಿಕಾರಿಗಳು ಹಾಗೂ ಸದಸ್ಯರು ಉಪಸ್ಥತರಿದ್ದರು.

See also  ಶ್ರೀ ಧ.ಮ.ಕಾಲೇಜು ಹಿರಿಯ ವಿದ್ಯಾರ್ಥಿ ಸಂಘ ಉಜಿರೆ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಮಾತೃಶ್ರೀ ಶ್ರೀಮತಿ ಹೇಮಾವತಿ ಹೆಗ್ಗಡೆ ಅವರಿಗೆ ಅಭಿನಂದನೆ

Leave a Reply

Your email address will not be published. Required fields are marked *

error: Content is protected !!