ಕಡಬದ ಕಳಾರ ನಿವಾಸಿ ನಿವೃತ್ತ ಶಿಕ್ಷಕ ಸ್ಕರಿಯ ನಿಧನ

ಶೇರ್ ಮಾಡಿ

ಕಡಬ : ನಿವೃತ್ತ ಶಿಕ್ಷಕ ಕಡಬದ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾಗಿದ್ದ ಕಡಬ ತಾಲೂಕಿನ ಕಳಾರ ನಿವಾಸಿ ಸ್ಕರಿಯ(ವ.72) ಅವರು ಸ್ವಗೃಹದಲ್ಲಿ ಅಕ್ಟೋಬರ್ 18ರಂದು ನಿಧನ ಹೊಂದಿದರು.
ಶಿಕ್ಷಕರಾಗಿ ಒಟ್ಟು 33 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು, ಕಡಬದ ಸೈಂಟ್ ಜೋಕಿಮ್ಸ್ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ ವರ್ಗಾವಣೆಗೊಂಡು, ಕೊಕ್ಕಡ ಸಮೀಪದ ಕೌಕ್ರಾಡಿ ಸೈಂಟ್ ಜೋನರ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಸುಮಾರು 8 ವರ್ಷಗಳ ಕಾಲ ಸೇವೆ ಸಲ್ಲಿಸಿ ಅಲ್ಲಿ ನಿವೃತ್ತರಾಗಿದ್ದರು. ಶೈಕ್ಷಣಿಕವಾಗಿಯೂ ಹಾಗೂ ಸಾಮಾಜಿಕವಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

Leave a Reply

error: Content is protected !!
%d bloggers like this: