ಅ.22 ನೆಲ್ಯಾಡಿ ಶ್ರೀ ರಾಮ ವಿದ್ಯಾಲಯದ ನೂತನ ಪಾಕಶಾಲೆ ಸೀತಾಮೃತಂ ಮತ್ತು ಶೌಚಾಲಯ ಘಟಕದ ಉದ್ಘಾಟನೆ ಹಾಗೂ ಅಭಿನಂದನಾ ಕಾರ್ಯಕ್ರಮ

ಶೇರ್ ಮಾಡಿ

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯನಗರ ನೂತನ ಪಾಕಶಾಲೆ ಸೀತಾಮೃತಂ ಮತ್ತು ಶೌಚಾಲಯ ಘಟಕದ ಉದ್ಘಾಟನೆ ಹಾಗೂ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ತಂಡಕ್ಕೆ ಅಭಿನಂದನ ಕಾರ್ಯಕ್ರಮ ದಿನಾಂಕ 22/10/2022ನೇ ಶನಿವಾರ ಪೂರ್ವಾಹ್ನ 10.00ರಿಂದ ಶ್ರೀ ರಾಮ ವಿದ್ಯಾಲಯದ ನೂತನ ಪಾಕಶಾಲೆ ಸೀತಾಮೃತಂ ಮತ್ತು ಶೌಚಾಲಯ ಉದ್ಘಾಟನೆ ಹಾಗೂ ವಿದ್ಯಾಭಾರತಿ ಕ್ರೀಡಾ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶ್ರೀರಾಮ ಶಾಲಾ ತಂಡಕ್ಕೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಳಿನ್ ಕುಮಾರ್ ಕಟೀಲ್ ಸಂಸದರು ಮಂಗಳೂರು, ಅಭ್ಯಾಗತರಾಗಿ ಕೃಷ್ಣ ಶೆಟ್ಟಿ ಕಡಬ ನಿರ್ದೇಶಕರು ವಿದ್ಯಾವರ್ಧಕ ಸಂಘ ಪುತ್ತೂರು, ಎ.ಮಹೇಶ್ವರ ರೆಡ್ಡಿ, ಜನರಲ್ ಮ್ಯಾನೇಜರ್ SMATUDE Pvt Ltd ಇವರು ಪಾಲ್ಗೊಳ್ಳಲಿದ್ದಾರೆ. ಎಂದು ಶ್ರೀ ರಾಮ ವಿದ್ಯಾಲಯದ ಅಧ್ಯಕ್ಷರಾದ ಡಾ.ಮುರಳೀಧರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

See also  ಎನ್ನೆಂಸಿ: ಯುವ ರೆಡ್ ಕ್ರಾಸ್ ಘಟಕದಿಂದ ವಿಶ್ವ ತಂಬಾಕು ರಹಿತ ದಿನಾಚರಣೆ

Leave a Reply

Your email address will not be published. Required fields are marked *

error: Content is protected !!