ಬರೆಂಗಾಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಪೂರ್ವಭಾವಿ ಸಭೆ

ಶೇರ್ ಮಾಡಿ

ಬರೆಂಗಾಯ: ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬರೆಂಗಾಯದಲ್ಲಿ ಡಿಸೆಂಬರ್ 10ರಂದು ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಬಗ್ಗೆ ಪೂರ್ವಭಾವಿ ಸಭೆಯು ನಡೆಯಿತು.
ಶಾಲಾ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾಗಿ ಅವಿನಾಶ್ ರಾವ್,ಅಗ್ರೀಲೈಫ್ ಮಾಲಕರು ಬರೆಂಗಾಯ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂಧರ್ಭದಲ್ಲಿ ಸಮಿತಿ ರಚಿಸಲಾಗಿದ್ದು 25 ಜನ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಈ ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಗೋಪಾಲ್ ರವರು ಸ್ವಾಗತಿಸಿ ಸೂಕ್ತ ಸಲಹೆ ಸೂಚನೆ ನೀಡಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ರುಕ್ಮಯ್ಯ ಪೂಜಾರಿ ಜ್ಯೋತಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಿವರಂಜನ್ ನಿಡ್ಲೆ ಶಾಲಾ ಶಿಕ್ಷಕರು ಎಸ್ ಡಿ ಎಂ ಸಿ ಸದಸ್ಯರು ಪೋಷಕರು ಊರಿನ ವಿದ್ಯಾಭಿಮಾನಿಗಳು ಹಳೆವಿದ್ಯಾರ್ಥಿಗಳು ಈ ಸಂಧರ್ಭದಲ್ಲಿ ಹಾಜರಿದ್ದರು. ಶಾಲಾ ಶಿಕ್ಷಕರಾದ ಸ್ವಾಮಿ ಧನ್ಯವಾದವಿತ್ತರು.

Leave a Reply

error: Content is protected !!