ಸುಬ್ರಹ್ಮಣ್ಯ: ಶ್ರೇಷ್ಠ ಭಾರತೀಯ ಸನಾತನ ಪರಂಪರೆಯನ್ನು ವಿದ್ಯಾರ್ಥಿ ಗಳಿಗೆ ಪರಿಚಯಿಸುವ ಸಲುವಾಗಿ ‘ಸನಾತನ ವಾಙ್ಮಯ’ ಎಂಬ ಮೌಲ್ಯವರ್ಧಿತ ವಿಶಿಷ್ಟ ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಯ ಉದ್ಘಾಟನಾ ಕಾರ್ಯಕ್ರಮವು ಅ.22ರಂದು ಶನಿವಾರ ನಡೆಯಿತು.
ಪ್ರಾಂಶುಪಾಲರಾದ ಡಾ.ದಿನೇಶ್ ಪಿ.ಟಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ತಾಳಮದ್ದಲೆಯ ಕಲಾವಿದರಾದ ಭವ್ಯಶ್ರೀ ಮಂಡೆಕೋಲು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ.ಗೋವಿಂದ ಎನ್. ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಏಕಾಗ್ರತೆ ಹಾಗೂ ಮನಸ್ಸಿನ ಪ್ರಶಾಂತತೆಗಾಗಿ ಧ್ಯಾನ ಅಭ್ಯಾಸ ಮಾಡಿಸಲಾಯಿತು. ವಿದ್ಯಾರ್ಥಿಗಳು ದಿನ ಪಂಚಾಂಗ, ಕಾರ್ತಿಕೇಯ ಸ್ತೋತ್ರ, ಸರಸ್ವತಿ ಸ್ತೋತ್ರ, ಭಜನೆ ಹಾಗೂ ಪ್ರಾರ್ಥನಾ ಶ್ಲೋಕಗಳ ವಾಚನವನ್ನು ನಡೆಸಿಕೊಟ್ಟರು. ಈ ಸರಣಿಯ ಮೊದಲ ಕಾರ್ಯಕ್ರಮವನ್ನು ಅಂತಿಮ ಕಲಾ ಪದವಿ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಪೂಜಾ ಶ್ರೀ ಸ್ವಾಗತಿಸಿ, ಸಂತೋಷ್ ಅತಿಥಿಗಳ ಕಿರುಪರಿಚಯವನ್ನು ನೀಡಿ, ಕೌಸಲ್ಯ ವಂದಿಸಿ, ಚುಂಚನ ಕಾರ್ಯಕ್ರಮ ನಿರೂಪಿಸಿದರು.