ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ,ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು.ಸಹಯೋಗದಲ್ಲಿ ದಿನಾಂಕ 28.10.22 ರಂದು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ. ಕನ್ನಡ ರಾಜ್ಯೋತ್ಸವದ ಆಚರಣೆಯ ಮುನ್ನುಡಿಯಾಗಿ ಕೋಟಿಕಂಠ ಗಾಯನ ಕಾರ್ಯಕ್ರಮವನ್ನು ಸಂಚಾಲಕರಾದ ಅಬ್ರಹಾಂ ವರ್ಗಿಸ್ ರವರ ನೇತೃತ್ವದಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಸ್ವಯಂಸೇವಕರು, ರೇಂಜರ್ ರೋವರ್ಸ್ ಮತ್ತು ಸ್ಕೌಟ್ ಗೈಡ್ಸ್, ಕಾಲೇಜ ವಿದ್ಯಾರ್ಥಿಗಳು, ಪ್ರೌಢಶಾಲಾ ವಿದ್ಯಾರ್ಥಿಗಳು, ಉಪನ್ಯಾಸಕ ಮತ್ತು ಅಧ್ಯಾಪಕ ಹಾಗೂ ಬೋಧಕೇತರ ವೃಂದದವರು ಭಾಗವಹಿಸಿದ್ದರು.
ರಾಷ್ಟ್ರಕವಿ ಕುವೆಂಪುರವರು ರಚಿಸಿದ ನಾಡಗೀತೆ ಜೈ ಭಾರತ ಜನನಿಯ ತನುಜಾತೆ ಹಾಡನ್ನು ಹಾಡಲಾಯಿತು. ನಂತರ ಎರಡನೇ ಗೀತೆ ಹುಯಿ ಲಗೋಳ ನಾರಾಯಣರಾವ್ ರವರ ರಚನೆ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಗೂ ಮೂರನೆಯ ಹಾಡು ರಾಷ್ಟ್ರಕವಿ ಕುವೆಂಪುರವರ ರಚಿಸಿದ ಬಾರಿಸು ಕನ್ನಡ ಡಿಂಡಿಮವ ಹಾಗೂ ನಾಲ್ಕನೆಯ ಹಾಡು ಡಿಎಸ್ ಕರ್ಕಿ ರವರು ರಚಿಸಿದ ಹಚ್ಚೇವು ಕನ್ನಡದ ದೀಪ ಮತ್ತು ಐದನೆಯ ಹಾಡು ಪ್ರಸಿದ್ಧ ಕವಿ ಚನ್ನವೀರ ಕಣವಿಯವರು ರಚಿಸಿದ ವಿಶ್ವ ವಿನೂತನ ವಿದ್ಯಾ ಚೇತನ ಮತ್ತು ಆರನೆಯ ಹಾಡು ಹಂಸಲೇಖರವರು ರಚಿಸಿದ ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು.ಹಾಡುಗಳನ್ನು ಹಾಡಲಾಯಿತು. ಕಾರ್ಯಕ್ರಮದಲ್ಲಿ ಸಂತ ಜಾರ್ಜ್ ಪ್ರೌಢಶಾಲೆಯ ಮುಖ್ಯ ಗುರುಗಳಾದ ತೋಮಸ್ ಎಂ.ಐ, ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಏಲಿಯಾಸ್ ಎಂ.ಕೆ, ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಯ ಬಗ್ಗೆ ಸ್ಪೂರ್ತಿ ತುಂಬುವ ಅಭಿಮಾನದ ಮಾತುಗಳನ್ನಾಡಿದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ವಿಶ್ವನಾಥ ಶೆಟ್ಟಿ.ಕೆ., ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯ ಗುರುಗಳಾದ ಹರಿಪ್ರಸಾದ್ ಕೆ., ಎನ್ಎಸ್ಎಸ್ ಘಟಕ ನಾಯಕ ಲಿಖಿತ್, ಘಟಕ ನಾಯಕಿ ಶ್ರೇಯ ಎಂ.ಇ., ಬೋಧಕ ಮತ್ತು ಬೋಧಕೇತರ ವೃಂದ ದವರು ಉಪಸ್ಥಿತರಿದ್ದರು. ಕಾಲೇಜು ಸಂಸತ್ತಿನ ನಾಯಕಿ ಮಾನ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!