ನೆಲ್ಯಾಡಿ ಜ್ಞಾನೋದಯ ಬೆಥನಿ ಕಾಲೇಜಿನ ವಿದ್ಯಾರ್ಥಿಗಳ ಜೈವಿಕ ಸಿಮೆಂಟು ವಿಜ್ಞಾನ ಮಾದರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಜ್ಞಾನೋದಯ ಬೆಥನಿ ಕಾಲೇಜಿನ ಮೂವರು ವಿದ್ಯಾರ್ಥಿಗಳು INSEF Indian Science and Engineering Fair ಪ್ರಶಸ್ತಿಗೆ 9ನೇ ತರಗತಿಯ ಸಾನ್ವಿ ಮಾರ್ಲ, ಆಧ್ಯತಾ ರಾವ್ ಆಯ್ಕೆಯಾಗಿದ್ದಾರೆ. ಕಿರಿಯ ರ ವಿಭಾಗದಲ್ಲಿ 7ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ.ರಕ್ಷಿತಾರವರು ಕಂಚಿನ ಪದಕವನ್ನು ಪಡೆದು ವಿಜೇತರಾಗಿದ್ದಾರೆ.
ಇವರು ತಯಾರಿಸಿದ ಮಾದರಿಯು ಸಂಪೂರ್ಣವಾಗಿ ಜೈವಿಕವಾಗಿದ್ದು, ಪರ್ಷಿಯ ಮಕ್ರಾಂತ ಮತ್ತು ಗ್ರೇವ್ಯ ಸೆರ್ಲೇಟ್ ಎಂಬ ಮರದ ತೊಗಟೆಯನ್ನು ನೀರಲ್ಲಿ ನೆನೆಸಿಟ್ಟಾಗ ಸಿಗುವ ಅಂಟು ಪದಾರ್ಥವನ್ನು ಸಣ್ಣ ಮರಳಿನೊಂದಿಗೆ ಬೆರೆಸಿ ಜ್ಯೆವಿಕ ಸಿಮೆಂಟನ್ನು ತಯಾರಿಸಲಾಗುತ್ತದೆ. ಮಾರ್ಗದರ್ಶನವನ್ನು ಸಂಸ್ಥೆಯ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ.ಪೂರ್ಣಿಮ ಹರೀಶ್. ಶ್ರೀಮತಿ.ಪ್ರಣವಿ ಮತ್ತು ಸೋನು ರವರು ನೀಡಿ ಸಹರಿಸಿದ್ದಾರೆ. ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರಾದ ತೋಮಸ್ ಬಿಜಿಲಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.

See also  ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ವಿದ್ಯಾರ್ಥಿ ಮಿಲನ್ ಗೆ ಇನ್ಸ್ಪೈರ್ ಪ್ರಶಸ್ತಿಯ ಹೆಗ್ಗಳಿಕೆ

Leave a Reply

Your email address will not be published. Required fields are marked *

error: Content is protected !!