ಸಾಫಿನ್ಸಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜು ನೆಲ್ಯಾಡಿ : ವಿದ್ಯಾರ್ಥಿ ಸಂಘ ಚುನಾವಣೆ

ಶೇರ್ ಮಾಡಿ
ಆದಿತ್ಯ ಕೃಷ್ಣ
ಜೋಬಿನ್
ಹಂಸೀಫಾ

ನೆಲ್ಯಾಡಿ: ಸಾಫಿನ್ಸಿಯ ಬೆಥನಿ ಕಾಲೇಜಿನ 2022-23 ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯಿತು. ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಅಂತಿಮ ಬಿ.ಎ. ವಿದ್ಯಾರ್ಥಿ ಆದಿತ್ಯ ಕೃಷ್ಣ, ಉಪಾಧ್ಯಕ್ಷನಾಗಿ ಅಂತಿಮ ಬಿ.ಕಾಂ.ವಿದ್ಯಾರ್ಥಿ ಜೋಬಿನ್, ಕಾರ್ಯದರ್ಶಿಯಾಗಿ ಅಂತಿಮ ಬಿ. ಕಾಂ.ನ ಹಂಸೀಫಾ ಆಯ್ಕೆಯಾದರು. ಹಾಗೆಯೇ ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಅಂತಿಮ ಬಿ.ಎ. ಯ ಸಮ್ಯಕ್ತ್ ಜೈನ್, ಕ್ರೀಡಾ ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಎ.ಯ ಕಬೀರ್ ಆಯ್ಕೆಯಾದರು.
ಉಪ ಪ್ರಾಂಶುಪಾಲರಾದ ಫಾ.ಜಿಜನ್ ಅಬ್ರಹಾಂ ಮತದಾನದ ಕುರಿತು ಮಾರ್ಗದರ್ಶನ ನೀಡಿದರು. ಚುನಾವಣಾಧಿಕಾರಿಯಾಗಿ ಉಪನ್ಯಾಸಕ ವಿಶ್ವನಾಥ್ ಎಸ್. ಕಾರ್ಯನಿರ್ವಹಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗದವರು ಚುನಾವಣಾ ಕರ್ತವ್ಯ ನಿರ್ವಹಿಸಿದರು.

Leave a Reply

error: Content is protected !!