ಅರಸಿನಮಕ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

ಶೇರ್ ಮಾಡಿ

ಅರಸಿನಮಕ್ಕಿ: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮಯ್ಯ ಶೆಟ್ಟಿ ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡಾಕೂಟಗಳು ವಿದ್ಯಾರ್ಥಿಗಳನ್ನು ಪಾಠ ಪ್ರವಚನದ ಕಡೆಗೆ ಕೊಂಡೊಯ್ಯುವುದರ ಜೊತೆಗೆ ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಲು ಅವಕಾಶ ಕಲ್ಪಿಸುತ್ತದೆ ಎಂದರು.

ಕಾಲೇಜಿನ ಉಪನ್ಯಾಸಕರಾದ ಮಧು ಎ.ಜೆ, ಕುಮಾರಿ ರಮಣಿ, ಕುಮಾರಿ ಉಷಾ ಎಂ ರವರು ಸಂದರ್ಭೋಚಿತವಾಗಿ ಮಾತನಾಡಿ ಕ್ರೀಡಾಕೂಟಕ್ಕೆ ಶುಭವನ್ನು ಹಾರೈಸಿದರು. ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಚೇರಿ ಸಿಬ್ಬಂದಿ ರಶ್ಮಿತಾ ಪಿ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಉಪನ್ಯಾಸಕಿ ಶ್ರೀಮತಿ ಪವಿತ್ರಾ ಪಿ.ಎಸ್ ಸ್ವಾಗತಿಸಿದರು. ಉಪನ್ಯಾಸಕಿ ರೇಷ್ಮಾ.ಎ ವಂದಿಸಿದರು. ಉಪನ್ಯಾಸಕಿಯಾದ ಶ್ರೀಮತಿ ಸೌಮ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಯನ್ನು ನಡೆಸಲಾಯಿತು.

See also  ದೈಹಿಕ ಕ್ಷಮತೆಯಲ್ಲಿ ಕ್ರೀಡೆ ಬಹುಮುಖ್ಯ ಪಾತ್ರ ವಹಿಸುತ್ತವೆ - ಪುರುಷೋತ್ತಮ ಮುಂಗ್ಲಿಮನೆ

Leave a Reply

Your email address will not be published. Required fields are marked *

error: Content is protected !!