ನೇಸರ ಡಿ.14: ವಿಧಾನ ಪರಿಷತ್ ಚುನಾವಣೆಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ದ.ಕ ಕ್ಷೇತ್ರದ ಮತ ಎಣಿಕೆ ಕಾರ್ಯವು ಮುಕ್ತಾಯ ಗೊಂಡಿದ್ದು,
ಒಟ್ಟು ಚಲಾವಣೆ ಮತ -6,011 5,955 ಸಿಂಧು ಮತ 56 ಅಸಿಂಧು. ಬಿ.ಜೆ.ಪಿಯ ಕೋಟ ಶ್ರೀನಿವಾಸ ಪೂಜಾರಿ- 3,672 ಕಾಂಗ್ರೆಸ್ ನ ಮಂಜುನಾಥ ಭಂಡಾರಿ-2,079 ಎಸ್.ಡಿ.ಪಿ.ಐ ನ ಶಾಫಿ.ಕೆ -204.
ದ.ಕ.ಜಿಲ್ಲೆಯ 231 ಹಾಗೂ ಉಡುಪಿ ಜಿಲ್ಲೆಯ 158 ಸಹಿತ ಎರಡು ಜಿಲ್ಲೆಗಳ ಒಟ್ಟು 389 ಮತಗಟ್ಟೆಗಳಲ್ಲಿ ಒಟ್ಟು 6,040 ಮತದಾರರ ಪೈಕಿ 6,011ಮಂದಿ ಮತದಾನವಾಗಿತ್ತು. ಇದರಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ 3672 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿ ಮೂರನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ನ ಮಂಜುನಾಥ ಭಂಡಾರಿ 2079 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಎಸ್.ಡಿ.ಪಿ.ಐಯ ಶಾಫಿ ಬೆಳ್ಳಾರೆ ಮತಗಳನ್ನು 204 ಪಡೆದು ಸೋಲನುಭವಿಸಿದ್ದಾರೆ. 56 ಮತ ತಿರಸ್ಕೃತ ಗೊಂಡಿದೆ.