ಶ್ರೀ ರಾಮಕುಂಜೇಶ್ವರ ಪದವಿಪೂರ್ವ ವಿದ್ಯಾಸಂಸ್ಥೆಗೆ ಪ್ರೊಜೆಕ್ಟರ್, ಕವಾಟು ಹಸ್ತಾಂತರ

ಶೇರ್ ಮಾಡಿ

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ 2009-10ರ ಬ್ಯಾಚಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು, ತಾವು ಕಲಿತ ವಿದ್ಯಾಸಂಸ್ಥೆಗೆ ಪ್ರೊಜೆಕ್ಟರ್ ಒಂದನ್ನು ಉಡುಗೊರೆಯಾಗಿ ನೀಡಿ, ಕಾಲೇಜಿನಲ್ಲಿ ಕಲಿಕೆಗೆ ಉತ್ತಮ ವಾತಾವರಣವನ್ನು ನಿರ್ಮಿಸುವಲ್ಲಿ ಸಹಕರಿಸಿದರು.
ಈ ಮಹತ್ತರವಾದ ಕಾರ್ಯದ ನೇತೃತ್ವವನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ ಮತ್ತು ಬೆಂಗಳೂರಿನಲ್ಲಿ ಲೆಕ್ಕಪರಿಶೋಧಕರಾಗಿರುವ ಭುವನೇಶ್ ಬುಡಲೂರು ವಹಿಸಿದರು.
ಅದಲ್ಲದೆ ಕೊಣಾಲು ಗ್ರಾಮದ ಅಂಬರ್ಜೆ ಮೋಹನ ಪೂಜಾರಿ ದಂಪತಿಗಳು, ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿಗೆ ಉಡುಗೊರೆಯಾಗಿ ಕವಾಟು ಒಂದನ್ನು ನೀಡಿದರು. ತಮ್ಮ ಮಗಳು ದಿ.ಶೇಯಾಳ ಸ್ಮರಣಾರ್ಥ ನೀಡಿದ ಕವಾಟಿನ ಕೀಲಿಕೈಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ರಾಧಾಕೃಷ್ಣ ಕೆ.ಎಸ್ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿಯವರು “ದಾನಿಗಳು ನೀಡಿದ ಈ ಕಲಿಕಾಪೂರಕ ವಸ್ತುಗಳು, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಮರ್ಪಣಾ ಭಾವದಿಂದ ಉಡುಗೊರೆ ನೀಡಿದ ನಿಮಗೆಲ್ಲರಿಗೆ ಭಗವಂತ ಸುಖ ಶಾಂತಿ ನೀಡಲಿ” ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಚಂದ್ರಶೇಖರ ಕೆ, ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಸತೀಶ್ ಭಟ್ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

Leave a Reply

error: Content is protected !!