ನೂಜಿಬಾಳ್ತಿಲ: ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಗುಡ್ಡಗಾಡು ಓಟ

ಶೇರ್ ಮಾಡಿ

ಕಡಬ : ಪದವಿ ಪೂರ್ವ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹಾಗೂ ಬೆಥನಿ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ ವತಿಯಿಂದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಗುಡ್ಡಗಾಡು ಓಟ ಬುಧವಾರ ನಡೆಯಿತು.
ಕಡಬ ಸಮೀಪದ ಕಳಾರದಿಂದ ಬೆಳಗ್ಗೆ ಗುಡ್ಡಗಾಡು ಓಟಕ್ಕೆ ಚಾಲನೆ ನೀಡಲಾಯಿತು. ಬಳಿಕ ನೂಜಿಬಾಳ್ತಿಲ ವಿದ್ಯಾಸಂಸ್ಥೆಯಲ್ಲಿ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕ ರೇ.ಫಾ ಝಕರಿಯಾಸ್ ನಂದಿಯಾಟ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕೃಷ್ಣಪ್ಪ ಜಿ. ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಅಂತರಾಷ್ಟ್ರೀಯ ತಾಂತ್ರಿಕ ಅಧಿಕಾರಿ ರಾಧಾಕೃಷ್ಣ, ಅಂತರಾಷ್ಟ್ರೀಯ ಕ್ರೀಡಾಪಟು ದಾಮೋದರ, ಹಿರಿಯ ವಿದ್ಯಾರ್ಥಿ ಪಿ.ಪಿ.ಎಲಿಯಾಸ್, ಮಾಮಚ್ಚನ್, ಎಸ್.ಎಸ್.ಪಿ.ಯು. ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಭಿಲಾಷ್ ಪಿ.ಕೆ., ಕೆ.ಪಿ.ಥೋಮಸ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಪೂರ್ಣಿಮಾ, ಪ್ರೌಢಶಾಲಾ ಮುಖ್ಯಗುರು ಸುಬ್ರಹ್ಮಣ್ಯ ಎಸ್.ಭಟ್, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತರಭೇತುದಾರ ಮಂಜುನಾಥ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಯೇನೆಕಲ್ಲು ಅವರನ್ನು ಸಮ್ಮಾನಿಸಲಾಯಿತು. ಪ್ರಾಂಶುಪಾಲ ಜಾರ್ಜ್ ಟಿ.ಎಸ್. ಸ್ವಾಗತಿಸಿದರು. ಸುಬ್ರಹ್ಮಣ್ಯ ಎಸ್.ಭಟ್ ವಂದಿಸಿದರು. ಬೀನಾ ಜಾರ್ಜ್ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ:
ಹುಡುಗರ ವಿಭಾಗದಲ್ಲಿ ಉಜಿರೆ ಎಸ್.ಡಿ.ಎಂ. ಪ್ರಥಮ, ನೂಜಿಬಾಳ್ತಿಲ ಬೆಥನಿ ಪಿಯು ಕಾಲೇಜು ದ್ವಿತೀಯ, ಆಳ್ವಾಸ್ ಮೂಡುಬಿದಿರೆ ತೃತೀಯ ಸ್ಥಾನ ಪಡೆಯಿತು. ಸಂಜು ಬಿ.ಎಂ., ಗಣಪತಿ, ಯಶವಂತ ಕೆ., ಚಿರೇಶ್ ಗೌಡ ಎಂ., ಜಿತೇಶ್, ಮಿಥೇಶ್, ಮೋಕ್ಷಿತ್ ಸಿ., ಶ್ರವಣ್ ಕೆ.ಕೆ., ಮಹೇಶ್ ಬಿ., ಯಕ್ಷಿತ್ ಮೊದಲ ಹತ್ತು ಸ್ಥಾನಗಳನ್ನು ಪಡೆದರು.
ಹುಡುಗಿಯರ ವಿಭಾಗದಲ್ಲಿ ಆಳ್ವಾಸ್ ಮೂಡುಬಿದಿರೆ ತಂಡ ಪ್ರಥಮ, ನೂಜಿಬಾಳ್ತಿಲ ಬೆಥನಿ ಪಿಯು ಕಾಲೇಜು ದ್ವಿತೀಯ, ರಾಮಕುಂಜದ ಶ್ರೀ ರಾಮಕುಂಜೇಶ್ವರ ಪ.ಪೂ. ಕಾಲೇಜು ತೃತೀಯ ಸ್ಥಾನ ಪಡೆಯಿತು. ಪ್ರತಿಭಾ, ರಶ್ಮಿ, ಪ್ರಣಮ್ಯ, ದೀಕ್ಷಿತಾ, ಶ್ರದ್ಧಾ, ಚಿತ್ರಾ ಟಿ.ಪಿ., ಐಶ್ವರ್ಯ ಎಸ್., ರಕ್ಷಿತಾ ಬಿ.ಕೆ., ನವ್ಯಾಶ್ರೀ ಜಿ., ಪ್ರಮೀಳಾ ಮೊದಲ ಹತ್ತು ಸ್ಥಾನಗಳನ್ನು ಪಡೆದರು.

Leave a Reply

error: Content is protected !!