
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಹ್ಮಣ್ಯ ಇಲ್ಲಿನ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದಿಂದ ಕಂದ್ರಪ್ಪಾಡಿಯ ಪ್ರೀತಮ್ ಮುಂಡೋಡಿ ಇವರ ಗದ್ದೆಯಲ್ಲಿ ಆಯೋಜಿಸಲಾದ ಭತ್ತದ ಕೃಷಿಯ ಸಂರಕ್ಷಣೆಯಲ್ಲಿ ಯುವಜನಾಂಗದ ಪಾತ್ರ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಂದ ನೇಜಿ ನೆಡುವ ಕಾರ್ಯಕ್ರಮವು ಪೂರ್ವಾಹ್ನ 10ಕ್ಕೆ ಆರಂಭಗೊಂಡು ಅಪರಾಹ್ನ 3ಕ್ಕೆ ಮುಕ್ತಾಯವಾಯಿತು. ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕರುಗಳಾದ ಶ್ರೀಮತಿ ಅಶ್ವಿನಿ ಎಸ್ ಎನ್ ಮತ್ತು ಅಕ್ಷಿತ್ ಕೆ ಎಸ್ ಸಂಯೋಜಿಸಿದ್ದರು.




