SSLC ಮುಖ್ಯ ಪರೀಕ್ಷೆ ನೋಂದಣಿ ದಿನಾಂಕ ಡಿಸೆಂಬರ್ 3ರ ವರೆಗೆ ವಿಸ್ತರಣೆ

ಶೇರ್ ಮಾಡಿ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2023ರ ಮಾರ್ಚ್‌ ಮಾಹೆಯಲ್ಲಿ ಎಸ್ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ ನಡೆಯಲಿವೆ. ಈ ಪರೀಕ್ಷೆಗಾಗಿ ರಾಜ್ಯದ ಶಾಲಾ, ಕಾಲೇಜುಗಳಿಂದ ಹಾಜರಾಗುವ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.

2023 ಮಾರ್ಚ್ / ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ 2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನ ರಹಿತ ಶಾಲಾ/ ಕಾಲೇಜುಗಳಿಂದ ಹಾಜರಾಗುವ ಅರ್ಹ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳ ಮಾಹಿತಿಯನ್ನು ಆನ್‌ಲೈನ್‌ ಮೂಲಕ ನೋಂದಾಯಿಸಲು ಅವಕಾಶ ನೀಡಲಾಗಿದ್ದು, ಈ ಹಿಂದೆ ದಿನಾಂಕವನ್ನು 25-11-2022 ರವರೆಗೆ ವಿಸ್ತರಣೆ ಮಾಡಲಾಗಿತ್ತು.

ಆದರೆ, ರಾಜ್ಯದ ಕೆಲವು ಶಾಲೆಗಲಿಂದ ಹಾಗು ಪೋಷಕರಿಂದ ಮಂಡಳಿಗೆ ದೂರವಾಣಿ ಮುಖಾಂತರ ವಿದ್ಯಾರ್ಥಿಗಳ ನೋಂದಣಿ ಮಾಡಲು ದಿನಾಂಕವನ್ನು ಪುನಃ ವಿಸ್ತರಿಸಲು ಕೋರಿಕೆಗಳು ಬಂದ ಹಿನ್ನಲೆಯಲ್ಲಿ, ವಿದ್ಯಾರ್ಥಿಗಳ ನೋಂದಣಿಗಾಗಿ ಈಗ ಈ ದಿನಾಂಕವನ್ನು ವಿಸ್ತರಿಸಿದ್ದು, ಪರೀಕ್ಷೆ ನೋಂದಣಿಗೆ 03-12-2022 ರವರೆಗೆ ಅವಕಾಶ ನೀಡಿದೆ. ಅರ್ಜಿಗಳನ್ನು ಶಾಲೆಗಳ ಮುಖಾಂತರ ಸಲ್ಲಿಸಬಹುದಾಗಿದೆ.

ಸದರಿ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯಿಂದ 2023ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳ (CCERF), ಖಾಸಗಿ ಅಭ್ಯರ್ಥಿಗಳ (CCEPF) ಮತ್ತು ಪುನರಾವರ್ತಿತ ಅಭ್ಯರ್ಥಿಗಳ ( CCRPR, CCEPR, NSR,NSPR) ವಿವರಗಳನ್ನು ಮಂಡಳಿಯ https://sslc.karnataka.gov.in ಜಾಲತಾಣದ ಶಾಲಾ ಲಾಗಿನ್ ಮೂಲಕ ಅಪ್‌ಲೋಡ್‌ ಮಾಡಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

Leave a Reply

error: Content is protected !!