ನೇಸರ ಡಿ 16: ಇತಿಹಾಸ ಪ್ರಸಿದ್ಧ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ದೇವರ ಗದ್ದೆಯಲ್ಲಿ ಕೋರಿ ಜಾತ್ರೆ ಸಂಭ್ರಮ.
ಬೆಳಗ್ಗೆ ದೇವಸ್ಥಾನದಲ್ಲಿ ಆರಂಭಗೊಂಡ ಧನುಪೂಜೆಯ ನಂತರ ದೇವರ ಗದ್ದೆಯಲ್ಲಿ ಹರಕೆ ಹೊತ್ತ ಭಕ್ತರು ಇಷ್ಟಾರ್ಥ ಸಿಧ್ಧಿಗಾಗಿಸರೋಳಿ ಸೊಪ್ಪನ್ನು ಗದ್ದೆಗೆ ಹಾಕುವ ಮೂಲಕ ಸಂಭ್ರಮಿಸಿದರು.
ದೇವಾಲಯದಲ್ಲಿ ಗಣಹೋಮ, ಏಕಾದಶರುದ್ರ ನಡೆಯಿತು.
ಮಧ್ಯಾಹ್ನ ಪೂಜೆಯ ಬಳಿಕ ದೇವಳದ ತಂತ್ರಿಯವರು ಜಾನುವಾರುಗಳಿಗೆ ಎಣ್ಣೆ ಹಾಕುವ ಮೂಲಕ ದೈವಗಳೊಂದಿಗೆ ಡೋಲು,ಬ್ಯಾಂಡ್, ಚಂಡೆ ವಾದನಗಳೊಂದಿಗೆ ದೇವಳದಿಂದ ದೇವರ ಗದ್ದೆಗೆ ಮೆರವಣಿಗೆಯ ಮೂಲಕ ಕೋಣ, ಎತ್ತುಗಳನ್ನು ಕರೆದುಕೊಂಡು ಹೋಗಲಾಯಿತು.ಮಧ್ಯಾಹ್ನ ಸಾಂಪ್ರದಾಯಿಕ ಕಂಬಳದ ರೀತಿಯಲ್ಲಿ ಜಾನುವಾರುಗಳನ್ನು ಗದ್ದೆಗೆ ಇಳಿಸಲಾಯಿತು. ಜಿಲ್ಲೆಯ ನಾನಾ ಭಾಗಗಳಿಂದ ರೈತರು ತಮ್ಮ ಜಾನುವಾರಗಳನ್ನು ಗದ್ದೆಗೆ ಹರಕೆಯ ರೂಪದಲ್ಲಿ ಇಳಿಸಿದರು.
ಸಾವಿರಾರು ಭಕ್ತರು ಸುಡುಬಿಸಿಲಿನಲ್ಲೂ ದೇವರ ಈ ಸಂಪ್ರದಾಯಿಕ ಜಾತ್ರೆಯಲ್ಲಿ ಪಾಲ್ಲೊಂಡರು
ಸಂಜೆ ದೇವಳದಲ್ಲಿ ಬ್ರಹ್ಮಶ್ರೀ ಎಡ ಮನೆ ದಾಮೋದರ ತಂತ್ರಿಗಳ ನೇತೃತ್ವದಲ್ಲಿ, ಶ್ರೀ ವೈದ್ಯನಾಥೇಶ್ವರ ಹಾಗೂ ವಿಷ್ಣುಮೂರ್ತಿ ದೇವರು ದೇವರ ಗದ್ದೆಗೆ ನಡೆದುಕೊಂಡು ಹೋಗುವುದನ್ನು ನೋಡುವುದೇ ಒಂದು ಸಂಭ್ರಮ. ಶ್ರೀ ದೇವರುಗಳು ಕೋರಿ ಗದ್ದೆಯ ಮಜಲಿನಲ್ಲಿರುವ ಕಟ್ಟೆಯಲ್ಲಿ ಎರಡು ಉತ್ಸವಮೂರ್ತಿಗಳಾಗಿ ರಾರಾಜಿಸಿದರು.ಪ್ರಸಾದ ವಿತರಣೆಯ ಬಳಿಕ ದೇವಸ್ಥಾನಕ್ಕೆ ಬಂದು ಉತ್ಸವ ಜರುಗಿತು.