ನೆಲ್ಯಾಡಿ: ಕರ್ನಾಟಕ ರಾಜ್ಯ ಸರ್ಕಾರದ ಆದೇಶದ ಅನ್ವಯ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕರಿಗೆ ವಿದ್ಯುತ್ ಬಗೆಗಿನ ಮಾಹಿತಿ, ಸುರಕ್ಷತೆಯ ಅರಿವು, ವಿವಿಧ ಯೋಜನೆ ಗಳ ಮಾಹಿತಿ ಮತ್ತು ಗ್ರಾಹಕರ ವಿದ್ಯುತ್ ನ ಸಮಸ್ಯೆಗಳನ್ನು ಆಲಿಸುವ ಪ್ರತಿ ತಿಂಗಳ 3ನೇ ಶನಿವಾರ ಹಮ್ಮಿಕೊಳ್ಳುವ “ವಿದ್ಯುತ್ ಅದಾಲತ್ ” ಕಾರ್ಯಕ್ರಮವು. ಈ ತಿಂಗಳ ವಿದ್ಯುತ್ ಅದಾಲತ್ ಕಾರ್ಯಕ್ರಮವು ನಾಳೆ(ದ.17) ರಂದು ಬೆಳಗ್ಗೆ 11.00 ಗಂಟೆಗೆ ಕಡಬ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ)(ಪ್ರ) ಸಜಿಕುಮಾರ್ ರವರ ಉಪಸ್ಥಿತಿಯಲ್ಲಿ ನೆಲ್ಯಾಡಿ – ಕೌಕ್ರಾಡಿ ಶಬರೀಶ ಕಲಾಮಂದಿರ ದಲ್ಲಿ ಆಯೋಜಿಸಲಾಗಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರೊಂದಿಗೆ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ನೆಲ್ಯಾಡಿ ಮೆಸ್ಕಾಂ ನ ಶಾಖಾಧಿಕಾರಿ ರಮೇಶ್ ರವರು ಪ್ರಕಟಣೆಯಲ್ಲಿ ತಿಳಿಸಿದರು.