ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದಲ್ಲಿ ಕುಸುಮ ಸಾರಂಗ ಮತ್ತು ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ ಇದರ ವತಿಯಿಂದ ಹೊತ್ತು ಕಂತುಕನ ನಾಟಕದ ಪ್ರಮಾಣ ಪತ್ರ ವಿತರಣೆ ಹಾಗೂ ಅರೆ ಭಾಷೆಯಲ್ಲಿ ಪ್ರಕಟಗೊಂಡ ಪುಸ್ತಕದ ಹಸ್ತಾಂತರ ಕಾರ್ಯಕ್ರಮ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ದಿನೇಶ್ ಪಿ.ಟಿ, ಪ್ರಾಂಶುಪಾಲರು ಕೆ.ಎಸ್. ಎಸ್ ಕಾಲೇಜು ಸುಬ್ರಮಣ್ಯ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಲಕ್ಷ್ಮೀನಾರಾಯಣ ಕಜೆಗದ್ದೆ ನಿಕಟಪೂರ್ವ ಅಧ್ಯಕ್ಷರು, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಮಡಿಕೇರಿ ಉಪಸ್ಥಿತರಿದ್ದರು. ಅತಿಥಿಯಾಗಿ ಪ್ರವೀಣ್ ಎಡಮಂಗಲ ರಂಗ ತರಬೇತಿ ನಿರ್ದೇಶಕರು ಮತ್ತು ಡಾ.ಗೋವಿಂದ ಎನ್.ಎಸ್ ಆಂತರಿಕ ಭರವಸಾ ಕೋಶದ ಸಂಯೋಜಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅರೆ ಭಾಷೆಯಲ್ಲಿ ಪ್ರಕಟಗೊಂಡ ಒಟ್ಟು 60 ವಿವಿಧ ಪುಸ್ತಕಗಳನ್ನು ಮಹಾವಿದ್ಯಾಲಯದ ಗ್ರಂಥಾಲಯಕ್ಕೆ ಅಕಾಡೆಮಿಯವರು ಹಸ್ತಾಂತರಿಸಿದರು ನಾಟಕದಲ್ಲಿ ಅಭಿನಯಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಪುಷ್ಪಾ ಡಿ ಮತ್ತು ಶ್ರೀಮತಿ ಸುಮಿತ್ರ ಉಪಸ್ಥಿತರಿದ್ದರು. ಕುಸುಮ ಸಾರಂಗ ಘಟಕದ ನಾಯಕಿಯಾದ ಕುಮಾರಿ ಪೂಜಾ ಸ್ವಾಗತಿಸಿದರು. ದಿತೇಶ ವಂದಿಸಿದರು. ಕುಮಾರಿ ದಿಶಾ ನಿರೂಪಿಸಿದರು.